alex Certify ಅಜೀರ್ಣ ಸಮಸ್ಯೆಯೇ……? ನಿವಾರಣೆಗೆ ಈ ʼಆಹಾರʼ ಬೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಜೀರ್ಣ ಸಮಸ್ಯೆಯೇ……? ನಿವಾರಣೆಗೆ ಈ ʼಆಹಾರʼ ಬೆಸ್ಟ್

ಪ್ರತಿನಿತ್ಯ ನಾವು ಅಕ್ಕಿ ಮತ್ತು ಗೋಧಿಯನ್ನು ಹೆಚ್ಚಾಗಿ ಬಳಸ್ತೇವೆ. ಆದ್ರೆ ಭರಪೂರ ಪೋಷಕಾಂಶವುಳ್ಳ ಇನ್ನು ಕೆಲವು ಧಾನ್ಯಗಳು ನಮ್ಮ ಡಯಟ್ ಲಿಸ್ಟ್ ನಲ್ಲಿ ಸೇರಿಲ್ಲ. ಅದೇ ಜೋಳದ ರೊಟ್ಟಿ. ಕೆಲವರಿಗೆ ಗೋಧಿ ಸುಲಭವಾಗಿ ಜೀರ್ಣವಾಗುವುದಿಲ್ಲ. ಇನ್ನು ಕೆಲವರಿಗೆ ಅದರಿಂದ ಅಲರ್ಜಿಯೂ ಉಂಟಾಗಬಹುದು. ಅಂಥವರಿಗೆಲ್ಲ ಜೋಳದ ರೊಟ್ಟಿ ಬಲು ಸೂಕ್ತ.

ಜೋಳದಲ್ಲಿ ಅಂಟಿನ ಅಂಶ ಕಡಿಮೆ ಇರುತ್ತದೆ. ಯಾರಿಗೆ ಅಂಟಿನಿಂದ ಅಲರ್ಜಿ ಉಂಟಾಗುತ್ತದೆಯೋ ಅವರು ಜೋಳವನ್ನು ಹೆಚ್ಚಾಗಿ ಸೇವಿಸಬಹುದು. ಜೋಳ ಸುಲಭವಾಗಿ ಜೀರ್ಣವಾಗಬಲ್ಲ ಆಹಾರ. ಹಾಗಾಗಿ ಅಜೀರ್ಣದ ತೊಂದರೆ ಇರುವವರಿಗೆಲ್ಲ ಜೋಳದ ರೊಟ್ಟಿ ಬೆಸ್ಟ್. ಜೋಳದ ಖಿಚಡಿ ಕೂಡ ಮಾಡಿ ಸೇವಿಸಬಹುದು.

ಇದರಿಂದ ಉದರಭಾದೆ ನಿವಾರಣೆಯಾಗುತ್ತದೆ, ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ನಮ್ಮ ಹೃದಯ, ನರಗಳ ಆರೋಗ್ಯಕ್ಕೆ ಬೇಕಾದ ಮತ್ತು ದೇಹಕ್ಕೆ ಶಕ್ತಿ ಕೊಡಬಲ್ಲ ಮೆಗ್ನಿಶಿಯಂ, ರಂಜಕದ ಅಂಶ ಕೂಡ ಜೋಳದಲ್ಲಿ ಹೇರಳವಾಗಿದೆ. ಜೋಳದ ರೊಟ್ಟಿ ಸೇವನೆಯಿಂದ ಪೋಷಕಾಂಶಗಳ ಕೊರತೆಯನ್ನು ಕೂಡ ದೂರ ಮಾಡಬಹುದು.

ಜೋಳವನ್ನು ಎಲ್ಲಾ ಕಾಲದಲ್ಲೂ ನೀವು ತಿನ್ನಬಹುದು. ಅದರಲ್ಲೂ ಚಳಿಗಾಲದಲ್ಲಿ ಜೋಳದ ರೊಟ್ಟಿ ಅಥವಾ ಖಿಚಡಿ ಸೇವನೆ ಉತ್ತಮ. ಚಳಿಗಾಲದಲ್ಲೂ ಜೋಳ ನಮ್ಮ ದೇಹವನ್ನು ಬೆಚ್ಚಗಿಡುತ್ತದೆ. ಒಂದೊಳ್ಳೆ ಪಲ್ಯ ಜೊತೆಗಿದ್ರೆ ಜೋಳದ ರೊಟ್ಟಿ ಎಂಥವರ ಬಾಯಲ್ಲೂ ನೀರೂರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...