alex Certify ಅಜಿತ್‍ರ ಬಹುನಿರೀಕ್ಷಿತ ಆಕ್ಷನ್ ಚಿತ್ರ ‘ವಲಿಮೈ’ಗೆ ಬಳಸಿದ ವಾಹನಗಳೆಷ್ಟು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಜಿತ್‍ರ ಬಹುನಿರೀಕ್ಷಿತ ಆಕ್ಷನ್ ಚಿತ್ರ ‘ವಲಿಮೈ’ಗೆ ಬಳಸಿದ ವಾಹನಗಳೆಷ್ಟು ಗೊತ್ತಾ…..?

ಅಜಿತ್ ಕುಮಾರ್ ಅವರು ತಮ್ಮ ಮುಂಬರುವ ಆಕ್ಷನ್ ಚಿತ್ರ ವಲಿಮೈ ಸಿನಿಮಾ ಅಭಿಮಾನಿಗಳಲ್ಲಿ  ಭಾರಿ ಕುತೂಹಲ ಮೂಡಿಸಿದೆ. ಇದು ಪ್ಯಾನ್ ಇಂಡಿಯಾ ಚಲನಚಿತ್ರವಾಗಿರುವುದರಿಂದ ಅತಿದೊಡ್ಡ ಆಕ್ಷನ್ ಎಂಟರ್ಟೈನರ್ ಎಂದೇ ಹೇಳಲಾಗುತ್ತಿದೆ.

ಚಿತ್ರದ ಟ್ರೇಲರ್ ಈಗಾಗಲೇ ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದು, ಬೊಂಬಾಟ್ ಆಕ್ಷನ್ ಸೆಟ್-ಪೀಸ್‌ಗಳನ್ನು ಜನರು ಶ್ಲಾಘಿಸುತ್ತಿದ್ದಾರೆ. ಚಿತ್ರದ ನಿರ್ಮಾಪಕ ಬೋನಿ ಕಪೂರ್ ಹೈ ಆಕ್ಷನ್, ಸ್ಟಂಟ್ ಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ತಮ್ಮ 150 ದಿನಗಳ ಸಿನಿಮಾ ಚಿತ್ರೀಕರಣದಲ್ಲಿ ಕೇವಲ ಆಕ್ಷನ್ ಸೆಟ್ ಚಿತ್ರೀಕರಣಕ್ಕೆ 80 ದಿನಗಳನ್ನು ತೆಗೆದುಕೊಂಡಿರುವುದಾಗಿ ಬೋನಿ ಕಪೂರ್ ತಿಳಿಸಿದ್ದಾರೆ. ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ, ಅವರು ಕೆಲವು ಬಾರಿ ಚಿತ್ರೀಕರಣದ ವೇಳಾಪಟ್ಟಿ ಸಂಘರ್ಷಗಳನ್ನು ಎದುರಿಸಬೇಕಾಯಿತು. ಚಿತ್ರಕ್ಕಾಗಿ ಅವರು ಸುಮಾರು 150 ಮೋಟಾರ್ ಬೈಕ್‌ಗಳನ್ನು ಬಳಸಿದ್ದು, 15 ರಿಂದ 20 ಕಾರುಗಳನ್ನು ಸಹ ಬಳಸಿದ್ದಾರೆ. ಅವುಗಳಲ್ಲಿ 4 ಹೊಚ್ಚಹೊಸ ಕಾರುಗಳಾಗಿವೆ ಮತ್ತು ಅವುಗಳಲ್ಲಿ ಕೆಲವನ್ನು ಸಿನಿಮಾಕ್ಕಾಗಿ ಸ್ಫೋಟಿಸಲಾಗಿದೆ. ರಷ್ಯಾದಲ್ಲಿ ಸುಮಾರು 25 ರಿಂದ 30 ಬೈಕ್‌ಗಳನ್ನು ಖರೀದಿಸಿದ ಚಿತ್ರತಂಡ, ಚಿತ್ರೀಕರಣದ ನಂತರ ಅವುಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಿದ್ದಾರೆ.

ಆರಂಭದಲ್ಲಿ, ವಲಿಮೈ ಸಿನಿಮಾವನ್ನು ಜನವರಿ 13 ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಇದೀಗ ಅಂತಿಮವಾಗಿ ಫೆಬ್ರವರಿ 24 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ವಲಿಮೈ ಅಬ್ಬರಿಸಲಿದೆ. ಚಿತ್ರವು ಹಿಂದಿ, ತಮಿಳು, ತೆಲುಗು, ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಅಜಿತ್ ಜೊತೆಗೆ ಈ ಚಿತ್ರದಲ್ಲಿ ಹುಮಾ ಖುರೇಷಿ ಮತ್ತು ಕಾರ್ತಿಕೇಯ ಗುಮ್ಮಕೊಂಡ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...