alex Certify ಅಚ್ಚರಿಗೊಳಿಸುತ್ತೆ ಈ ಸಂಗತಿ: ವಿರಾಟ್ ಕೊಹ್ಲಿ ಟೆಸ್ಟ್ ಸ್ಕೋರ್ ಬಗ್ಗೆ ಸರಿಯಾದ ಭವಿಷ್ಯ ನುಡಿದಿದ್ದ ಅಭಿಮಾನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ಈ ಸಂಗತಿ: ವಿರಾಟ್ ಕೊಹ್ಲಿ ಟೆಸ್ಟ್ ಸ್ಕೋರ್ ಬಗ್ಗೆ ಸರಿಯಾದ ಭವಿಷ್ಯ ನುಡಿದಿದ್ದ ಅಭಿಮಾನಿ…!

ವಿರಾಟ್ ಕೊಹ್ಲಿಗೆ ಇದು ಸ್ಮರಣೀಯ ದಿನ. ನೂರು ಟೆಸ್ಟ್ ಪಂದ್ಯಗಳನ್ನಾಡಿದ ಕೆಲವೇ ಆಟಗಾರರಲ್ಲಿ ವಿರಾಟ್ ಸಹ ಒಬ್ಬರು ಎಂಬ ದಾಖಲೆ ಬರೆದ ದಿನ. ನೂರನೇ ಪಂದ್ಯದಲ್ಲಿ ವಿರಾಟ್, ನೂರು ಅಂಕ ಗಳಿಸುತ್ತಾರೆ ಎಂದು ಎಲ್ಲಾ ಅಭಿಮಾನಿಗಳು ಅಂದುಕೊಂಡಿದ್ರು.

ಆದ್ರೆ ಅದು ಆಗಲಿಲ್ಲ ಮೂರನೇ ಆರ್ಡರ್ನಲ್ಲಿ ಫೀಲ್ಡ್ ಗಿಳಿದ ಕಿಂಗ್ ಕೊಹ್ಲಿ ಒಳ್ಳೆ ಇನ್ನಿಂಗ್ಸ್ ಶುರುಮಾಡಿದ್ರು, ಒಳ್ಳೆ ಕ್ರೀಸ್ನಲ್ಲಿರುವಾಗಲೆ ಲೆಫ್ಟ್ ಆರ್ಮ್ ಸ್ಪಿನ್ನರ್ ಲಸಿತ್ ಎಂಬಲ್ಡೇನಿಯಾ ಬಾಲ್ಗೆ ಶರಣಾದರು. ಇದರಿಂದ ಇಂಡಿಯನ್ ಟೀಮ್ ಹಾಗೂ ಅಭಿಮಾನಿಗಳಲ್ಲಿ ನಿರಾಶೆ ಉಂಟಾಗಿದ್ದಂತು ನಿಜ.

ಆದರೆ ಇದೇ ವೇಳೆ ಟ್ವೀಟ್ ಒಂದು ವೈರಲ್ ಆಗ ತೊಡಗಿತು. ಟ್ವಿಟ್ಟರ್ ಯೂಸರ್ ಒಬ್ಬರು ಕೊಹ್ಲಿಯ ಇಂದಿನ ಇನ್ನಿಂಗ್ಸ್ ಬಗ್ಗೆ ಭವಿಷ್ಯ ನುಡಿದಿದ್ದು ಸತ್ಯವಾಯಿತು. ಕೊಹ್ಲಿ ತನ್ನ ನೂರನೇ ಪಂದ್ಯದಲ್ಲಿ ನೂರು ಅಂಕಗಳನ್ನು ಗಳಿಸುವುದಿಲ್ಲ. ಕೊಹ್ಲಿ ನೂರು ಬಾಲ್ ಗಳಿಗೆ 45 ಅಂಕಗಳನ್ನು ಗಳಿಸುತ್ತಾರೆ, ಆದರೂ ಅವರ ಇನ್ನಿಂಗ್ಸ್ ಉತ್ತಮವಾಗಿರಲಿದೆ. ಎಂಬಲ್ಡೇನಿಯಾ ಅವರನ್ನು ಔಟ್ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಬಾಲ್ ಗಳ ಸಂಖ್ಯೆ ಬಿಟ್ಟರೆ ಉಳಿದೆಲ್ಲಾ ಅಂಶವು ಸರಿಯಾಗಿದೆ. ಏಕೆಂದರೆ ವಿರಾಟ್ ಇಂದಿನ ಇನ್ನಿಂಗ್ಸ್‌ನಲ್ಲಿ 75 ಬಾಲ್ಗಳನ್ನು ಎದುರಿಸಿದ್ದಾರೆ. ಒಟ್ಟಿನಲ್ಲಿ ಈ ಟ್ವೀಟ್ನಿಂದ ಎಲ್ಲರು ಆಶ್ಚರ್ಯಗೊಂಡಿರುವುದು ನಿಜ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...