alex Certify ‘ಅಗ್ನಿಪಥ್’ ಯೋಜನೆಗೆ ವಿರೋಧ: ಬಿಹಾರದಲ್ಲಿ ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಗ್ನಿಪಥ್’ ಯೋಜನೆಗೆ ವಿರೋಧ: ಬಿಹಾರದಲ್ಲಿ ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆ

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಅಗ್ನಿಪಥ್ ಯೋಜನೆಗೆ ದೇಶದ ಹಲವು ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಅದರಲ್ಲೂ ಬಿಹಾರದಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.

ಪ್ರತಿಭಟನಾನಿರತ ಯುವಕರು ಬಿಹಾರದ ಲಾಕ್ಮನಿಯಾ ರೈಲು ನಿಲ್ದಾಣವನ್ನು ಧ್ವಂಸಗೊಳಿಸಿದ್ದು, ರೈಲು ಹಳಿಗಳ ಮೇಲೂ ಸಹ ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮ ಹಲವು ರೈಲುಗಳ ಸಂಚಾರ ರದ್ದುಗೊಂಡಿದೆ.

ಇನ್ನು ಜಾರ್ಖಂಡ್, ಹರಿಯಾಣ, ರಾಜಸ್ಥಾನದಲ್ಲೂ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರ ಮಧ್ಯೆ ಅಗ್ನಿಪಥ್ ಯೋಜನೆ ಕುರಿತಂತೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ನಾಲ್ಕು ವರ್ಷಗಳ ಸೇವೆಯಿಂದ ಹೊರಬರುವ ‘ಅಗ್ನಿ ವೀರ’ರಿಗೆ ಖಾಸಗಿ ವಲಯದಲ್ಲೂ ಅವಕಾಶವಿದೆ. ಜೊತೆಗೆ ಅವರಿಗೆ ಸಿಗುವ ಹಣದಿಂದ ಸ್ವಂತ ಉದ್ಯಮ ಆರಂಭಿಸಬಹುದು ಎಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...