alex Certify ʼಸ್ವೆಟರ್ʼ ಸ್ವಚ್ಛತೆ ಹೇಗಿರಬೇಕು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ವೆಟರ್ʼ ಸ್ವಚ್ಛತೆ ಹೇಗಿರಬೇಕು ಗೊತ್ತಾ….?

ಚಳಿಗಾಲ ಬರುತ್ತಿದ್ದಂತೆ ಮೂಲೆಯಲ್ಲಿಟ್ಟ ಸ್ವೆಟರ್, ಶಾಲು, ರಗ್ಗುಗಳು ಹೊರ ಬರುತ್ತವೆ. ಅವುಗಳು ಹೆಚ್ಚು ಕಾಲ ಉಪಯುಕ್ತವಾಗುವಂತೆ ಮಾಡಲು ಈ ಎಲ್ಲಾ ಎಚ್ಚರಿಕೆಗಳು ಗಮನದಲ್ಲಿರಲಿ.

* ಚಳಿಗಾಲದಲ್ಲಿ ಉಪಯೋಗಿಸುವ ಉಣ್ಣೆ ಉಡುಗೆಗಳನ್ನು ಡ್ರೈ ಕ್ಲೀನ್ ಮಾಡಿಸದೆ ಇರುವುದು ಒಳಿತು. ಮನೆಯಲ್ಲಿ ತಣ್ಣೀರಿನಲ್ಲಿ ಬೇಬಿ ಶ್ಯಾಂಪೂ ಹಾಕಿ ಒಗೆಯಬೇಕು. ಚಳಿಗಾಲದ ಆರಂಭದಲ್ಲಿ ಬಳಸದೇ ಇರುವುದಕ್ಕೆ ಮೊದಲು, ಚಳಿಗಾಲ ಆದ ನಂತರ ಭದ್ರಗೊಳಿಸುವುದಕ್ಕೆ ಮುನ್ನ ಮತ್ತೊಂದು ಬಾರಿ ಒಗೆದರೆ ಸಾಕು.

* ಒದ್ದೆಯಾಗಿರುವ ಕಾಶ್ಮೀರಿ ಸ್ವೆಟರ್ ಅನ್ನು ಯಾವ ಕಾರಣಕ್ಕೂ ಜೋತಾಡುವಂತೆ ಇಡದಿರಿ. ಆ ರೀತಿ ಮಾಡಿದರೆ ಸಡಿಲವಾಗುತ್ತದೆ. ಅಷ್ಟೇ ಅಲ್ಲದೆ ಅವುಗಳನ್ನು ಹೆಚ್ಚು ಬಿಸಿಲಿನಲ್ಲಿ ಇಡಬಾರದು. ಸ್ವಲ್ಪ ಪ್ರಮಾಣದಲ್ಲಿ ಬಿಸಿಲು ಬೀಳುವ ಕಡೆ ಒಣಗುವುದಕ್ಕೆ ಹಾಕಬೇಕು.

* ಆದಷ್ಟು ಸ್ವೆಟರ್ ಧರಿಸಿದ ನಂತರ ಸುಗಂಧದ್ರವ್ಯಗಳನ್ನು ಬಳಸಬಾರದು. ಆಹಾರ ಸೇವಿಸುವಾಗ ಪದಾರ್ಥಗಳು ಬಿದ್ದರೆ ತಕ್ಷಣವೇ ಅವುಗಳನ್ನು ಶುಭ್ರಗೊಳಿಸಿ ಕಲೆಯಾಗದಂತೆ ಜಾಗ್ರತೆ ವಹಿಸಬೇಕು. ಇದಕ್ಕಾಗಿ ಬೇಕಿಂಗ್ ಸೋಡಾ ಬಳಸಬಹುದು.

* ಬಹಳಷ್ಟು ಜನರು ಚಳಿಗಾಲವೆಲ್ಲಾ ಒಂದೇ ಸ್ವೆಟರ್ ಬಳಸುತ್ತಾರೆ. ಎರಡು ಇದ್ದರೆ ಒಳಿತು. ಯಾಕೆಂದರೆ ಒಂದನ್ನೇ ಹೆಚ್ಚು ಕಾಲ ಬಳಸಿದರೆ ಸುಕ್ಕಾಗಿ ಬಿಡುತ್ತದೆ. ಅಷ್ಟೇ ಅಲ್ಲದೆ ಹಿಂದೆ ಬಾಗಿದಂತೆ ಕಂಡು ಬರುತ್ತದೆ. ಆದ ಕಾರಣ ಬಳಸಿದ ಪ್ರತಿ ದಿನವೂ ಗಾಳಿಯಲ್ಲಿ ಆರಿಸುವುದು ಒಳಿತು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...