alex Certify ʼವಿಶ್ವಸುಂದರಿʼ ಸ್ಪರ್ಧೆಗೆ ಕೊರೊನಾ ಸಂಕಷ್ಟ; ಸ್ಪರ್ಧೆ ಮುಂದೂಡಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಶ್ವಸುಂದರಿʼ ಸ್ಪರ್ಧೆಗೆ ಕೊರೊನಾ ಸಂಕಷ್ಟ; ಸ್ಪರ್ಧೆ ಮುಂದೂಡಿಕೆ…!

ಕೊರೊನ ಕಾರಣದಿಂದಾಗಿ ವಿಶ್ವ ಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನ ಸ್ಪರ್ಧೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಭಾರತದ ಸ್ಪರ್ಧಿ ಮಾನಸ ವಾರಾಣಸಿ ಸೇರಿದಂತೆ ಇನ್ನೂ ಹಲವು ಸ್ಪರ್ಧಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿರುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಸಂಘಟಕರು ರದ್ದುಗೊಳಿಸಿದ್ದಾರೆ.

ಈ ಸ್ಪರ್ಧೆಯ ಅಂತಿಮ ಸುತ್ತು ಡಿ. 16ರಂದು ನಡೆಯಬೇಕಾಗಿತ್ತು. ಆದರೆ, ಸ್ಪರ್ಧೆಗಳಿಗೆ ಸೋಂಕು ದೃಢಪಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 90 ದಿನಗಳ ನಂತರ ಸ್ಪರ್ಧಿಗಳು ಹಾಗೂ ಸಿಬ್ಬಂದಿಗಳಿಗೆಲ್ಲ ಕೋವಿಡ್ ನೆಗೆಟಿವ್ ದೃಢಪಟ್ಟ ನಂತರ ಈ ಸ್ಪರ್ಧೆ ನಡೆಸಲು ಸಂಘಟಕರು ನಿರ್ಧರಿಸಿದ್ದಾರೆ.

ಪಿಎಫ್ ಖಾತೆದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ: PF ಬ್ಯಾಲೆನ್ಸ್ ವರ್ಗಾಯಿಸಲು ಸುಲಭ ವಿಧಾನ

ಅಲ್ಲದೇ, ಈಗಾಗಲೇ ಕೊರೊನಾ ದೃಢಪಟ್ಟ ಸ್ಪರ್ಧಿಗಳನ್ನು ಅವರ ದೇಶಕ್ಕೆ ನೆಗೆಟಿವ್ ವರದಿ ಬಂದ ಮೇಲೆಯೇ ಕಳುಹಿಸಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.

2021ರ ವಿಶ್ವ ಸುಂದರಿ ಸ್ಪರ್ಧೆಯ ಕೊನೆಯ ಸುತ್ತಿನ ಸ್ಪರ್ಧೆ ಪೋರ್ಟೋರಿಕೊದ ಸ್ಯಾನ್ ಜುವಾನ್ ನಲ್ಲಿ ನಡೆಯಬೇಕಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...