alex Certify ʼಪೊಗರುʼ ವಿವಾದ: ಬೇರೆ ಧರ್ಮಗಳ ಬಗ್ಗೆ ಇದೇ ರೀತಿ ಚಿತ್ರೀಕರಿಸುವ ಧೈರ್ಯವಿದೆಯೇ…? ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪೊಗರುʼ ವಿವಾದ: ಬೇರೆ ಧರ್ಮಗಳ ಬಗ್ಗೆ ಇದೇ ರೀತಿ ಚಿತ್ರೀಕರಿಸುವ ಧೈರ್ಯವಿದೆಯೇ…? ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆ

ಬೆಂಗಳೂರು: ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗುವಂತಹ ದೃಶ್ಯವಿದ್ದು, ಈ ಕುರಿತು ಕಿಡಿಕಾರಿರುವ ಸಂಸದೆ ಶೋಭಾ ಕರಂದ್ಲಾಜೆ ಹಿಂದೂಗಳನ್ನು ಅವಮಾನ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ ಎಂದು ಗುಡುಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಶೋಭಾ ಕರಂದ್ಲಾಜೆ, ನಮ್ಮ ಭಾವನೆಗಳ ಮೇಲೆ ಸವಾರಿ ಮಾಡಲಾಗುತ್ತಿದೆ. ಇದೇ ರೀತಿ ಬೇರೆ ಧರ್ಮಗಳ ಬಗ್ಗೆ ಚಿತ್ರೀಕರಿಸುವ ಧೈರ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಪೊಗರು ಚಿತ್ರದ ವಿವಾದಾತ್ಮಕ ದೃಶ್ಯ ತೆಗೆದುಹಾಕುವವರೆಗೂ ಚಿತ್ರದ ಸ್ಕ್ರೀನಿಂಗ್ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ನಡುವೆ ಇಂದು ಸುದ್ದಿಗೋಷ್ಠಿ ನಡೆಸಿರುವ ಚಿತ್ರ ನಿರ್ದೇಶಕ ನಂದ ಕಿಶೋರ್ ಚಿತ್ರದಲ್ಲಿನ ವಿವಾದಿತ ದೃಶ್ಯ ನಾಳೆಯೇ ತೆಗೆಯುತ್ತೇವೆ. ಬ್ರಾಹ್ಮಣ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮೆಯಿರಲಿ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...