alex Certify ʼನಮ್ಮ ಕ್ಲಿನಿಕ್‌ʼ ಲೋಗೋ ವಿನ್ಯಾಸಗೊಳಿಸುವವರಿಗೆ ವಿಶೇಷ ಗೌರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನಮ್ಮ ಕ್ಲಿನಿಕ್‌ʼ ಲೋಗೋ ವಿನ್ಯಾಸಗೊಳಿಸುವವರಿಗೆ ವಿಶೇಷ ಗೌರವ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಳೆದ ವರ್ಷದ ಬಜೆಟ್‌ ನಲ್ಲಿ ‘ನಮ್ಮ ಕ್ಲಿನಿಕ್’ ಯೋಜನೆಯನ್ನು ಘೋಷಿಸಿದ್ದು, ಜುಲೈ 28 ರಿಂದ ಬೆಂಗಳೂರಿನ ಎರಡು ಭಾಗಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಆರಂಭಿಸಲಾಗಿದೆ.

ರಾಜ್ಯದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ನಮ್ಮ ಕ್ಲಿನಿಕ್ ಯೋಜನೆ ಆರಂಭಿಸಲಾಗಿದ್ದು, ರಾಜ್ಯದ ಒಟ್ಟು 438 ಕಡೆ ಇವುಗಳು ಆರಂಭವಾಗಲಿದೆ. ಇದೀಗ ಇದಕ್ಕೆ ಲೋಗೋ ವಿನ್ಯಾಸಗೊಳಿಸಲು ರಾಜ್ಯ ಸರ್ಕಾರ ಸಾರ್ವಜನಿಕರನ್ನು ಅಹ್ವಾನಿಸಿದೆ.

ಸರ್ಕಾರ ಹಾಗೂ ಆರೋಗ್ಯ ಇಲಾಖೆ ಉದ್ದೇಶವನ್ನು ಬಿಂಬಿಸುವಂತೆ ಲೋಗೋವನ್ನು ಸೃಜನಾತ್ಮಕವಾಗಿ ವಿನ್ಯಾಸಗೊಳಿಸಬೇಕಾಗಿದ್ದು, ಇದನ್ನು ಆಗಸ್ಟ್‌ 15 ರೊಳಗೆ logo4nammaclinic@gmail.com ಗೆ ಕಳುಹಿಸಿಕೊಡಬಹುದಾಗಿದೆ. ಆಯ್ಕೆಯಾದ ವಿನ್ಯಾಸಕ್ಕೆ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರಿಂದ ವಿಶೇಷ ವೈಯುಕ್ತಿಕ ಗೌರವ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...