alex Certify ʼಜಪ ಮಾಲೆʼ ಹಿಡಿದು ಮಂತ್ರ ಪಠಿಸುವುದರ ಹಿಂದಿದೆ ಈ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಜಪ ಮಾಲೆʼ ಹಿಡಿದು ಮಂತ್ರ ಪಠಿಸುವುದರ ಹಿಂದಿದೆ ಈ ಲಾಭ

ಸನಾತನ ಧರ್ಮದಲ್ಲಿ ದೇವರ ಆರಾಧನೆಗೆ ಅನೇಕ ಆಚರಣೆಗಳಿವೆ. ದೇವಸ್ಥಾನ ಭೇಟಿ, ಪೂಜೆ, ಆರತಿ, ಮಂತ್ರ ಪಠಣ ಬಹುಮುಖ್ಯವಾದದ್ದು. ಮಂತ್ರ ಪಠಿಸಿ ಬಹುಬೇಗ ದೇವರನ್ನು ಒಲಿಸಿಕೊಳ್ಳಬಹುದೆಂದು ನಂಬಲಾಗಿದೆ.

ಮಂತ್ರ ಜಪಿಸುವ ವೇಳೆ ಯಾವುದೇ ತಪ್ಪಾಗದಿರಲಿ ಎನ್ನುವ ಕಾರಣಕ್ಕೆ ಜಪ ಮಾಲೆಯನ್ನು ಬಳಸಲಾಗುತ್ತದೆ. ಜಪ ಮಾಲೆಯಲ್ಲಿ ಸಾಮಾನ್ಯವಾಗಿ 108 ಮಣಿಗಳಿರುತ್ತವೆ. ಸಣ್ಣ ಮಾಲೆಯಲ್ಲಿ 27 ಅಥವಾ 54 ಮಣಿಗಳಿರುತ್ತವೆ. ಮಾಲೆ ಹಿಡಿದು ಜಪ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು.

ಮೊದಲು ಶುದ್ಧವಾಗಿ, ಶುಭ್ರ ಬಟ್ಟೆಯನ್ನು ತೊಟ್ಟು ಭೂ ತಾಯಿಗೆ ನಮಿಸಿ. ನಂತ್ರ ಚಕ್ಕಲಪಟ್ಟೆ ಹಾಕಿ ಸೊಂಟ ಬಗ್ಗದಂತೆ ನೇರವಾಗಿ ಕುಳಿತುಕೊಳ್ಳಿ. ಮಾಲೆಗೆ ನಮಿಸಿ ಬಲಗೈನಲ್ಲಿ ಮಾಲೆಯನ್ನು ಹಿಡಿಯಿರಿ. ತೋರು ಬೆರಳಿಗೆ ಈ ಮಾಲೆ ತಾಗದಂತೆ ನೋಡಿಕೊಳ್ಳಿ.

ಮಂತ್ರದ ಮೇಲೆ ಸಂಪೂರ್ಣ ಧ್ಯಾನವಿರಲಿ. ಪ್ರತಿದಿನ ಸಮ ಅಥವಾ ಹೆಚ್ಚಿಗೆ ಮಂತ್ರವನ್ನು ಜಪಿಸಿ. ಮಂತ್ರ ಪಠಣೆ ಕಡಿಮೆಯಾಗದಂತೆ ನೋಡಿಕೊಳ್ಳಿ.

ಆರ್ಥಿಕ ವೃದ್ಧಿಗೆ ಕಮಲದ ಗಡ್ಡೆ, ವೈಜಯಂತಿ ಮಾಲೆ, ಸ್ಪಟಿಕ ಅಥವಾ ಹವಳದಿಂದ ಮಾಡಿದ ಮಾಲೆಯನ್ನು ಹಿಡಿದು ಜಪ ಮಾಡಿ.

ವಿದ್ಯೆಯನ್ನು ಒಲಿಸಿಕೊಳ್ಳಲು ಸ್ಪಟಿಕ ಅಥವಾ ರುದ್ರಾಕ್ಷಿ ಮಾಲೆ ಹಿಡಿದು ಸರಸ್ವತಿ ಮಂತ್ರವನ್ನು ಜಪಿಸಿ.

ಮನೆಯ ಸುಖ, ಶಾಂತಿಗಾಗಿ ಮಹಾ ಮೃತ್ಯಂಜಯ ಜಪವನ್ನು ರುದ್ರಾಕ್ಷಿ ಮಾಲೆ ಹಿಡಿದು ಪಠಿಸಿ.

ರುದ್ರಾಕ್ಷಿ ಮಾಲೆಯನ್ನು ಕೊರಳಿಗೆ ಧರಿಸಿದ್ರೆ ಹೃದಯ ಸಂಬಂಧಿ ಖಾಯಿಲೆ ಹಾಗೂ ರಕ್ತದೊತ್ತಡ ಕಡಿಮೆಯಾಗುತ್ತದೆ.

ದೇವಿಯನ್ನು ಒಲಿಸಿಕೊಳ್ಳಲು ಸ್ಪಟಿಕದ ಮಾಲೆಯಿಂದ ಮಂತ್ರ ಜಪಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...