alex Certify ʼಚಾಕೊಲೇಟ್ʼ ಚಪ್ಪರಿಸಿಕೊಂಡು ತಿನ್ನುವವರಿಗೊಂದು ಸಿಹಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಾಕೊಲೇಟ್ʼ ಚಪ್ಪರಿಸಿಕೊಂಡು ತಿನ್ನುವವರಿಗೊಂದು ಸಿಹಿ ಸುದ್ದಿ

ಚಾಕೊಲೇಟ್ ತಿನ್ನುವುದರಿಂದಾಗುವ ಪ್ರಯೋಜನಗಳು ಗೋತ್ತಾದರೆ ಚಾಕೊಲೇಟನ್ನು ಚಪ್ಪರಿಸಿಕೊಂಡು ತಿನ್ನಲು ಶುರುಮಾಡುತ್ತೀರಾ – ಅರಳಿ ಕಟ್ಟೆ

ಚಾಕೊಲೇಟ್ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಕೋಕೋದಿಂದ ಮಾಡಿರುವ ಚಾಕೊಲೇಟ್ ಅಂದ್ರೆ ಅನೇಕರಿಗೆ ಪಂಚಪ್ರಾಣ.

ದಕ್ಷಿಣ ಅಮೆರಿಕಾದ ಮೂಲ ನಿವಾಸಿಗಳು ಅನೇಕ ವರ್ಷಗಳ ಕಾಲ ಇದನ್ನು ದೇವರ ಆಹಾರವೆಂದು ಸೇವಿಸುತ್ತಿದ್ದರು. ಸುಮಾರು 100 ವರ್ಷಗಳಿಂದಲೂ ಈ ಚಾಕೊಲೇಟ್, ಸ್ವಾದ ಹಾಗೂ ರುಚಿಯಿಂದಾಗಿ ತನ್ನ ಸ್ಥಾನ ಉಳಿಸಿಕೊಂಡಿದೆ.

ಎಲ್ಲರ ಮನ ಗೆದ್ದಿರುವ ಈ ಚಾಕೊಲೇಟ್ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಒತ್ತಡ ಕಡಿಮೆ ಮಾಡುವ ಗುಣ ಚಾಕೊಲೇಟ್ ಗಿದೆ. ಅಧ್ಯಯನವೊಂದರ ಪ್ರಕಾರ ಎರಡು ವಾರಗಳ ಕಾಲ ಪ್ರತಿ ದಿನ ಡಾರ್ಕ್ ಚಾಕೊಲೇಟ್ ಸೇವಿಸುತ್ತ ಬಂದರೆ ಒತ್ತಡ ಕಡಿಮೆಯಾಗುತ್ತದೆಯಂತೆ.

2010 ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಚಾಕೊಲೇಟ್ ಸೇವನೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆ. ಯುರೋಪಿನ ಹೃದಯ ವಿಜ್ಞಾನ ಸಂಶೋಧನಾ ಸಂಸ್ಥೆ ಪ್ರಕಾರ ಹೃದಯ ಸಂಬಂಧಿ ಕಾಯಿಲೆ ಇರುವವರು ಹೆಚ್ಚಿನ ಪ್ರಮಾಣದಲ್ಲಿ ಚಾಕೊಲೇಟ್ ಸೇವಿಸಬೇಕಂತೆ.

ಆಸ್ಟ್ರೇಲಿಯಾ ಸಂಶೋಧಕರು 2015 ರಲ್ಲಿ ನಡೆಸಿದ ಸಂಶೋಧನೆ ಪ್ರಕಾರ, ವಯಸ್ಕರು ಚಾಕೊಲೇಟ್ ಸೇವಿಸುವುದು ಒಳ್ಳೆಯದು. ಚಾಕೊಲೇಟ್ ಸೇವಿಸುವುದರಿಂದ ಆತ್ಮ ತೃಪ್ತಿಗೊಂಡು, ಮೂಡ್ ರಿಪ್ರೆಶ್ ಆಗುತ್ತದೆಯಂತೆ.

ವಯಸ್ಸನ್ನು ಮುಚ್ಚಿಡಲು ಚಾಕೊಲೇಟ್ ಸಹಕಾರಿ. ವಯಸ್ಸಾದ ಚಿಹ್ನೆಗಳನ್ನು ಚಾಕೊಲೇಟ್ ಮುಚ್ಚಿಡುತ್ತದೆಯಂತೆ. ವಯಸ್ಸಾದವರು ಪ್ರತಿದಿನ ಚಾಕೊಲೇಟ್ ಸೇವಿಸುತ್ತ ಬಂದರೆ ಅವರ ಮಾನಸಿಕ ಆರೋಗ್ಯ ಸುಧಾರಿಸುತ್ತದೆಯಂತೆ.

ಆದರೆ ಚಾಕೊಲೇಟ್ ಸೇವಿಸುವ ಮುನ್ನ ಸಕ್ಕರೆ ಕಾಯಿಲೆ ಹೊಂದಿರುವವರು ಜಾಗರೂಕತೆ ವಹಿಸುವುದು ಒಳಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...