alex Certify ʼಚಳಿಗಾಲʼದಲ್ಲಿ ಕಣ್ಮನ ಸೆಳೆಯುವ ಪ್ರವಾಸಿ ಸ್ಥಳಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಳಿಗಾಲʼದಲ್ಲಿ ಕಣ್ಮನ ಸೆಳೆಯುವ ಪ್ರವಾಸಿ ಸ್ಥಳಗಳು

ಚಳಿಗಾಲ ಈಗಾಗಲೇ ಶುರುವಾಗಿದೆ. ವರ್ಷದ ಕೊನೆಯ ತಿಂಗಳು ಡಿಸೆಂಬರ್ ನಲ್ಲಿ ಸಾಮಾನ್ಯವಾಗಿ ರಜಾ ಮಜಾ ಸವಿಯಲು ಜನರು ಪ್ರವಾಸಕ್ಕೆ ಹೋಗ್ತಾರೆ. ಈ ಋತುವಿನಲ್ಲಿ ಹಿಮಭರಿತ ಪ್ರದೇಶಗಳಿಗೆ ಪ್ರವಾಸಕೈಗೊಂಡಾಗ ಸಿಗುವ ಖುಷಿಯೇ ಬೇರೆ.

ಮೈಕೊರೆಯುವ ಚಳಿ, ಹಿಮದಿಂದ ಆವೃತವಾಗಿರುವ ಪ್ರದೇಶ, ಎಲ್ಲಿ ನೋಡಿದ್ರೂ ಬೆಣ್ಣೆಯಂತ ಹಿಮ ನೋಡಲು ಎರಡು ಕಣ್ಣು ಸಾಲೋದಿಲ್ಲ. ಡಿಸೆಂಬರ್ ಕೊನೆಯಲ್ಲಿ ಪ್ರವಾಸ ಹೋಗುವ ಬಗ್ಗೆ ನೀವು ಯೋಚನೆ ಮಾಡ್ತಿದ್ದರೆ ಈ ಕೆಳಗಿನ ಯಾವುದಾದ್ರೂ ಪ್ರದೇಶಕ್ಕೆ ಹೋಗಿ.

ಧೌಲಾದಾರ್ ಡಾಲ್ಹೌಸಿ : ಹಿಮಾಚಲ ಪ್ರದೇಶ ಯಾರಿಗೆ ಇಷ್ಟವಿಲ್ಲ. ಅದ್ರಲ್ಲೂ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಜಾಗ ಧೌಲಾದಾರ್ ಡಾಲ್ಹೌಸಿ. ಚಳಿಗಾಲದಲ್ಲಿ ಇದ್ರ ಸೌಂದರ್ಯ ಇಮ್ಮಡಿಯಾಗುತ್ತದೆ. ಹಿಮದಿಂದ ಆವೃತವಾಗಿರುವ ಪರ್ವತಗಳು ನಿಮ್ಮೆಲ್ಲ ಚಿಂತೆಯನ್ನು ದೂರ ಮಾಡಿ ಕಣ್ಣಿಗೆ, ಮನಸ್ಸಿಗೆ ಮುದ ನೀಡುತ್ತವೆ.

ಸೋನಾಮಾರ್ಗ್ : ಜಮ್ಮು-ಕಾಶ್ಮೀರದಲ್ಲಿರುವ ಸೋನಾಮಾರ್ಗ್ ಸಾಹಸಿ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳ.

ಶಿಮ್ಲಾ : ಡಿಸೆಂಬರ್ ಕೊನೆಯ ವಾರಗಳಲ್ಲಿ ಅನೇಕರು ಶಿಮ್ಲಾ ಕಡೆ ಪ್ರಯಾಣ ಬೆಳೆಸ್ತಾರೆ. ಹನಿಮೂನ್ ಗೆ ಪ್ರಸಿದ್ದವಾಗಿರುವ ಶಿಮ್ಲಾವನ್ನೊಮ್ಮೆ ಕಣ್ತುಂಬಿಕೊಂಡು ಬನ್ನಿ.

ಲೆಹ್ : ಟ್ರೆಕಿಂಗ್ ಖಯಾಲಿ ಇರುವ ಜನರು ಲಡಾಕ್ ನ ಲೆಹ್ ಗೆ ಹೋಗಿ ಬನ್ನಿ. ಡಿಸೆಂಬರ್ ಟ್ರೆಕಿಂಗ್ ಗೆ ಒಳ್ಳೆಯ ತಿಂಗಳು. ಅಲ್ಲಿನ ಸೌಂದರ್ಯ ನಿಮ್ಮನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...