alex Certify ʼಚಪಾತಿʼಗೆ ಒಳ್ಳೆ ಕಾಂಬಿನೇಷನ್ ಪೆಪ್ಪರ್ ಚಿಕನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಪಾತಿʼಗೆ ಒಳ್ಳೆ ಕಾಂಬಿನೇಷನ್ ಪೆಪ್ಪರ್ ಚಿಕನ್

ನಾನ್ ವೆಜ್ ಪ್ರಿಯರಿಗೆ ಚಿಕನ್ ಎಂದರೆ ತುಂಬಾ ಇಷ್ಟ. ಇಲ್ಲಿ ಚಪಾತಿ, ಪರೋಟಕ್ಕೆ ಸಖತ್ ಕಾಂಬಿನೇಷನ್ ಆಗಿರುವ ಪೆಪ್ಪರ್ ಚಿಕನ್ ಮಾಡುವ ವಿಧಾನ ಇದೆ ಟ್ರೈ ಮಾಡಿ ನೋಡಿ.

½ ಕೆಜಿ ಚಿಕನ್ ಅನ್ನು ಚೆನ್ನಾಗಿ ತೊಳೆದು 1 ಚಮಚ ಉಪ್ಪು 1 ಟೀ ಸ್ಪೂನ್ ಅರಿಶಿನ ಹಾಕಿ ಬೇಯಲು ಇಡಿ. ಇದು ಬೆಂದ ಬಳಿಕ ಒಂದು ಕಡೆ ಇಟ್ಟು ಬಿಡಿ.

ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 3 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ 10 ಎಸಳು ಬೆಳ್ಳುಳ್ಳಿ, 1 ಇಂಚು ಶುಂಠಿಯನ್ನು ಜಜ್ಜಿ ಹಾಕಿ.

ನಂತರ ಇದಕ್ಕೆ 3 ಹಸಿಮೆಣಸು 1 ಈರುಳ್ಳಿಯನ್ನು ಕತ್ತರಿಸಿ ಹಾಕಿ ಈರುಳ್ಳಿ ಕೆಂಪಾಗುತ್ತಿದ್ದಂತೆ ಸೋಯಾ ಸಾಸ್ ಕೂಡ ಸೇರಿಸಿ ಬಳಿಕ ಚಿಕನ್ ಹಾಕಿ ಮಿಕ್ಸ್ ಮಾಡಿ.

ನಂತರ ಇದಕ್ಕೆ 3 ಚಮಚದಷ್ಟು ಕಾಳುಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಸರಿಯಾಗಿ ಬೇಯಿಸಿಕೊಂಡು ಗ್ಯಾಸ್ ಅಫ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...