alex Certify ʼಗರ್ಭಿಣಿʼಗೆ ನೆಗಡಿಯಾದ್ರೆ ಹೊಟ್ಟೆಯಲ್ಲಿರೋ ಮಗುವಿಗೆ ಏನಾಗತ್ತೆ ಗೊತ್ತಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗರ್ಭಿಣಿʼಗೆ ನೆಗಡಿಯಾದ್ರೆ ಹೊಟ್ಟೆಯಲ್ಲಿರೋ ಮಗುವಿಗೆ ಏನಾಗತ್ತೆ ಗೊತ್ತಾ……?

ಗರ್ಭಿಣಿಯರು ಯಾವಾಗ್ಲೂ ಬೆಚ್ಚಗಿರಬೇಕು ಅಂತಾ ಹಿರಿಯರು ಹೇಳೋದುಂಟು. ಆದ್ರೆ ಅದನ್ನು ಅಲಕ್ಷಿಸುವವರೇ ಹೆಚ್ಚು. ಇದೀಗ ಪ್ರಕಟವಾಗಿರೋ ಅಧ್ಯಯನ ವರದಿಯೊಂದು ಹಿರಿಯರ ಕಿವಿ ಮಾತನ್ನು ಪುಷ್ಠೀಕರಿಸುತ್ತದೆ. ಗರ್ಭಿಣಿಯರು ಆ ಮಾತನ್ನು ತಪ್ಪದೇ ಪಾಲಿಸಬೇಕು ಎನ್ನುತ್ತಿದೆ ಈ ಸಂಶೋಧನೆ.

ವಿಜ್ಞಾನಿಗಳ ಪ್ರಕಾರ ಗರ್ಭಿಣಿ ಬ್ಯಾಕ್ಟೀರಿಯಾ, ವೈರಸ್ ಅಟ್ಯಾಕ್ ನಿಂದ ಬಳಲಿದ್ರೆ ಅದರ ಪರಿಣಾಮ ಹೊಟ್ಟೆಯಲ್ಲಿರೋ ಮಗುವಿನ ಮೇಲೂ ಆಗುತ್ತದೆ. ಸಾಮಾನ್ಯವಾಗಿ ಕಾಡುವ ಶೀತದ ವೈರಸ್ ಭ್ರೂಣದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ಜನನಕ್ಕೂ ಮೊದಲೇ ಮಗುವಿನಲ್ಲಿ ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳುವ ಅಪಾಯವಿರುತ್ತದೆ.

ಇದರಿಂದ ಮಕ್ಕಳಿಗೆ ಬಾಲ್ಯದಲ್ಲೇ ಅಸ್ತಮಾ ಸಮಸ್ಯೆ ಕೂಡ ಶುರುವಾಗಬಹುದು. ಹಾಗಾಗಿ ಮಹಿಳೆಯರು ನೆಗಡಿಯಾಗದಂತೆ ಎಚ್ಚರ ವಹಿಸುವುದು ಉತ್ತಮ. ಹೋಟೆಲ್ ಗಳಲ್ಲಿ ಅಥವಾ ಬೇರೆ ಸ್ಥಳಗಳಲ್ಲಿ ನೀರು ಕುಡಿಯದಂತೆ ವೈದ್ಯರು ಸಲಹೆ ನೀಡುತ್ತಾರೆ. ಯಾಕಂದ್ರೆ ಶೀತದ ವೈರಸ್ ಗಳು ನೀರಿನ ಮೂಲಕವೂ ಹರಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...