alex Certify ʼಕೆಜಿಎಫ್-2ʼ ಅಬ್ಬರಕ್ಕೆ ಬಾಲಿವುಡ್ ʼದಂಗಲ್ʼ ದಾಖಲೆ ಉಡೀಸ್; ಮೊದಲ ಸ್ಥಾನದತ್ತ ʼರಾಕಿಭಾಯ್‌ʼ ದಾಪುಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೆಜಿಎಫ್-2ʼ ಅಬ್ಬರಕ್ಕೆ ಬಾಲಿವುಡ್ ʼದಂಗಲ್ʼ ದಾಖಲೆ ಉಡೀಸ್; ಮೊದಲ ಸ್ಥಾನದತ್ತ ʼರಾಕಿಭಾಯ್‌ʼ ದಾಪುಗಾಲು

ʼನಾನು ಬರೋವರ್ಗೂ ಮಾತ್ರ ಬೇರೆಯವರ ಹವಾ……ನಾನು ಬಂದ್ ಮೇಲೆ ನಂದೇ ಹವಾʼ ಅಂತ ರಾಕಿಂಗ್‌ ಸ್ಟಾರ್ ಯಶ್ ರಾಮಾಚಾರಿ ಸಿನೆಮಾದಲ್ಲಿ ಡೈಲಾಗ್ ಹೊಡೆದಿದ್ದರು. ಬಟ್ ಈಗ ರಿಯಲ್ ಲೈಫ್‌ ನಲ್ಲೂ ಆ ಹವಾ ಮೆಂಟೈನ್ ಮಾಡ್ತಿದ್ದಾರೆ.

ಈಗಾಗಲೇ ಎಲ್ಲರಿಗೂ ಗೊತ್ತಿರೋ ಹಾಗೆ ಕೆಜಿಎಫ್-2 ಅಬ್ಬರಿಸ್ತಿದೆ. ಸಿನೆಮಾ ರಿಲೀಸ್‌ ಗಿಂತ ಮುಂಚೆಯೇ ಕೆಲ ರೆಕಾರ್ಡ್ ಬ್ರೇಕ್ ಮಾಡಿತ್ತು. ಇನ್ನೂ ರಿಲೀಸ್ ಆದ್ಮೇಲಂತೂ ಬ್ರೇಕ್ ಆದ ರೆಕಾರ್ಡ್‌ ಗಳ ಸಂಖ್ಯೆ ಲೆಕ್ಕವೇ ಇಲ್ಲ. ಈಗ ಇದೇ ಕೆಜಿಎಫ್-2 , ಕಲೆಕ್ಷನ್ ವಿಚಾರದಲ್ಲಿ ಬಾಲಿವುಡ್‌ ನ ಸ್ಟಾರ್ ನಟರ ಸಿನೆಮಾಗಳನ್ನೇ ಹಿಂದಿಕ್ಕಿದ್ದಾಗಿದೆ. ಅದರಲ್ಲೂ ಎಲ್ಲರ ಆಲ್ ಟೈಂ ಫೇವರೇಟ್ ಆಗಿರೋ ಅಮೀರ್‌ ಖಾನ್‌ ನಟನೆಯ ದಂಗಲ್ ಚಿತ್ರದ ದಾಖಲೆಯನ್ನೂ ಸಹ ರಾಕಿಭಾಯ್ ಧೂಳಿಪಟ ಮಾಡಿದ್ದಾಗಿದೆ. ಆ ಮೂಲಕ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಎರಡನೇ ಸಿನೆಮಾವಾಗಿ ಕೆಜಿಎಫ್-2 ಹೊರಹೊಮ್ಮಿದೆ.

ನೀವು ಗಮನಿಸಿರೋ ಹಾಗೆ ಕೆಜಿಎಫ್-2 ರಿಲೀಸ್ ದಿನ ಅನೌನ್ಸ್ ಆಗಿದ್ದೇ ತಡ ಘಟಾನುಘಟಿ ನಟರ ಸಿನೆಮಾ ರಿಲೀಸ್ ಆಗುವ ದಿನ ಮುಂದೂಡಲಾಗಿತ್ತು. ಕೆಲ ಸಿನೆಮಾಗಳು ಕೆಜಿಎಫ್-2 ಜೊತೆ ಜೊತೆಗೆ ರಿಲೀಸ್ ಆಗಿದ್ದರೂ, ಕೆಜಿಎಫ್-2 ಆರ್ಭಟದ ಮುಂದೆ ಯಾವ ಒಂದು ಸಿನೆಮಾ ಕೂಡಾ ಸೌಂಡ್ ಮಾಡೋದಕ್ಕೆ ಸಾಧ್ಯವಾಗಿರ್ಲಿಲ್ಲ.

ಈಗ ಎಲ್ಲಿ ನೋಡಿದ್ರೂ ಕೆಜಿಎಫ್-2ನದ್ದೇ ಹವಾ. ಡಬ್ಬಿಂಗ್ ಆದ ಎಲ್ಲ ಭಾಷೆಗಳಲ್ಲೂ ಕೆಜಿಎಫ್-2 ಸೂಪರ್ಡೂಪರ್ ಹಿಟ್ ಆಗಿದೆ. ರಿಲೀಸ್ ಆಗಿ 22 ನೇ ದಿನವೂ ಹೌಸ್ಫುಲ್ ಆಗಿದೆ. ಅಮೀರ್‌ ಖಾನ್ ನಟಿಸಿದ್ದ ʼದಂಗಲ್ʼ ಸಿನೆಮಾ, ಕಲೆಕ್ಷನ್‌ ವಿಚಾರದಲ್ಲಿ 2ನೇ ಸ್ಥಾನದಲ್ಲಿತ್ತು. ಈಗ ಆ ಸ್ಥಾನವನ್ನ ಕೆಜಿಎಫ್-2 ಸಿನೆಮಾ ತನ್ನದಾಗಿಸಿಕೊಂಡಿದೆ. ಇನ್ನು ಮೊದಲ ಸ್ಥಾನದಲ್ಲಿ ಬಾಹುಬಲಿ-2 ಸಿನೆಮಾ ಇದೆ. ಈಗ ಕೆಜಿಎಫ್-2 ಕಲೆಕ್ಷನ್ ರೇಸ್ನಲ್ಲಿ ಮುನ್ನುಗ್ಗುತ್ತಿರೋ ಸ್ಪೀಡ್ ನೋಡಿದ್ರೆ ಆ ಸ್ಥಾನ ಕೂಡಾ ತನ್ನದಾಗಿಸಿಕೊಂಡರೂ ಅಚ್ಚರಿ ಇಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...