alex Certify ʼಇಮ್ಯೂನಿಟಿʼ ಹೆಚ್ಚಿಸಿಕೊಳ್ಳಲು ತಪ್ಪದೇ ಸೇವಿಸಿ ಈ ಸೂಪರ್‌ ಫುಡ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಇಮ್ಯೂನಿಟಿʼ ಹೆಚ್ಚಿಸಿಕೊಳ್ಳಲು ತಪ್ಪದೇ ಸೇವಿಸಿ ಈ ಸೂಪರ್‌ ಫುಡ್‌….!

ಸೋಯಾಬೀನ್ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಸೋಯಾಬೀನ್‌ ನಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕೂಡ ಇದನ್ನು ಒಪ್ಪಿಕೊಂಡಿದೆ. ಸೋಯಾಬೀನ್ನಲ್ಲಿ  ಪ್ರೋಟೀನ್, ಫೈಬರ್ ಮತ್ತು ಒಮೆಗಾ -3 ಅಂಶಗಳಿವೆ. ಈ ಪೋಷಕಾಂಶಗಳು ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತವೆ.

ಇಷ್ಟೇ ಅಲ್ಲ ಸೋಯಾಬೀನ್‌ನ ಗುಣಲಕ್ಷಣಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹ ಪರಿಣಾಮಕಾರಿಯಾಗಿವೆ. ನೀವು ಹೃದ್ರೋಗಗಳಿಂದ ದೂರವಿರಲು ಮತ್ತು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಬಯಸಿದರೆ, ನಿಮ್ಮ ದೈನಂದಿನ ಉಪಹಾರದಲ್ಲಿ ಸೋಯಾ ಚಂಕ್ಸ್‌, ಸೋಯಾ ಹಾಲು, ಸೋಯಾ ಹಿಟ್ಟು, ಸೋಯಾ ನಟ್ಸ್ ಮತ್ತು ತೋಫುಗಳಂತಹ ಆಹಾರಗಳನ್ನು ಸೇರಿಸಿಕೊಳ್ಳಬಹುದು.

ಹೃದಯಕ್ಕೆ ಪ್ರಯೋಜನಕಾರಿ: ಸಸ್ಯಾಹಾರದಲ್ಲಿ ಸೋಯಾಬೀನ್ ಅತ್ಯಧಿಕ ಪ್ರೋಟೀನ್ ಹೊಂದಿರುವ ಪದಾರ್ಥವಾಗಿದೆ. ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವೂ ತುಂಬಾ ಕಡಿಮೆ. ಸೋಯಾ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೋಯಾಬೀನ್‌ಗಳು ಅರ್ಜಿನೈನ್ ಅಮಿನೊ ಆಸಿಡ್ ಮತ್ತು ಐಸೊಫ್ಲಾವೊನ್‌ಗಳನ್ನು ಒಳಗೊಂಡಿದ್ದು, ಅದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಗುಣಲಕ್ಷಣಗಳು ರಕ್ತನಾಳಗಳನ್ನು ಆರೋಗ್ಯವಾಗಿಡುವ ಕೆಲಸ ಮಾಡುತ್ತವೆ. ಇದರಿಂದಾಗಿ ಹೃದಯದ ಕಾಯಿಲೆಗಳ ಅಪಾಯವಿರುವುದಿಲ್ಲ.

ರೋಗ ನಿರೋಧಕ ಶಕ್ತಿ ಹೆಚ್ಚಳ: ಸೋಯಾಬೀನ್‌ನಲ್ಲಿರುವ ಪ್ರೋಟೀನ್‌ಗಳು, ಆಂಟಿಒಕ್ಸಿಡೆಂಟ್‌ಗಳು ಮತ್ತು ಫೈಬರ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ಸೋಯಾಬೀನ್ ಸೇವನೆಯಿಂದ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಬರುತ್ತದೆ. ಈ ಕಾರಣಕ್ಕಾಗಿಯೇ ಕೋವಿಡ್‌ ಸಮಯದಲ್ಲಿ ಸೋಯಾವನ್ನು ಸೇವಿಸುವಂತೆ ಪ್ರಾಧಿಕಾರ ಸಲಹೆ ನೀಡಿತ್ತು. ಸೋಯಾದಿಂದ ಮಾಡಿದ ತಿನಿಸುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜ್ವರ, ನೆಗಡಿ ಮುಂತಾದ ಸಮಸ್ಯೆಗಳು ಹೆಚ್ಚಾಗಿ ಕಾಡುವುದಿಲ್ಲ.

ಕಾಯಿಲೆಗಳನ್ನು ತಡೆಗಟ್ಟಲು ಪ್ರಯೋಜನಕಾರಿ: ಸೋಯಾಬೀನ್ ಸಕ್ಕರೆಯ ಮಟ್ಟವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೂ ಪ್ರಯೋಜನಕಾರಿಯಾಗಿದೆ. ಸೋಯಾಬೀನ್‌ ಸೇವನೆಯಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಸೋಯಾ ಆಹಾರಗಳು ದೃಷ್ಟಿಶಕ್ತಿ ಹೆಚ್ಚಿಸುವಲ್ಲಿ ಸಹ ಪ್ರಯೋಜನಕಾರಿ. ಇದು ಮಾನಸಿಕ ಸಮತೋಲನವನ್ನೂ ಕಾಪಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...