alex Certify ʼಅಪರೂಪದ ಜೋಡಿʼ ಮದುವೆಗೆ ಸಾಕ್ಷಿಯಾದ್ರು ನೂರಾರು ಮಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಪರೂಪದ ಜೋಡಿʼ ಮದುವೆಗೆ ಸಾಕ್ಷಿಯಾದ್ರು ನೂರಾರು ಮಂದಿ

ವಿವಾಹ ಬಂಧನವೇ ಒಂದು ಅಚ್ಚರಿ. ಯಾವುದೋ ಊರಿನ ವರ, ಮತ್ಯಾವುದೋ ಸ್ಥಳದ ವಧುವಿನ‌ ನಡುವೆ ವಿವಾಹ ನಡೆದುಬಿಡುತ್ತದೆ. ಅನೇಕ ಸಂದರ್ಭಗಳಲ್ಲಿ ಅಂದ- ಚೆಂದ, ಎತ್ತರ ಪರಿಗಣನೆಯೇ ಆಗದು. ಕೆಲವು ಉದಾಹರಣೆಗಳಲ್ಲಿ ಅನುರೂಪ ಜೋಡಿ ಒಂದಾಗಿ ಬಿಡುತ್ತದೆ.

ಇಲ್ಲೊಂದು ಅಪರೂಪದ, ಅನುರೂಪದ ಜೋಡಿಯ ವಿವಾಹ ನಡೆದಿದೆ. ವಿವಾಹದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಬಿಹಾರದ ಭಾಗಲ್ಪುರದ ಈ ಮದುವೆ ನಡೆದಿದ್ದು, ವರ 36 ಇಂಚು ಎತ್ತರವಿದ್ದು, ವಧು 34 ಇಂಚು ಎತ್ತರವಿದ್ದಾರೆ.

BIG NEWS: ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಶೀಘ್ರ

ಈ ಅಸಾಮಾನ್ಯ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಡುವ ಸಂದರ್ಭದಲ್ಲಿ ಸಾಕ್ಷಿಯಾಗಲು ನೂರಾರು ಮಂದಿ ಹಾಜರಿದ್ದರು.

ಈ ವಿಡಿಯೋಗೆ ಒಂದಷ್ಟು ಹಾಸ್ಯ ಪ್ರತಿಕ್ರಿಯೆಗಳೂ ಬಂದಿವೆ. ಅನೇಕರು ಈ ಜೋಡಿ ಕಂಡು ಅಚ್ಚರಿಯನ್ನೂ ಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...