alex Certify ʼಅಪರೂಪʼ ಚಿತ್ರದ ಸಾಂಗ್ ಟೀಸರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಪರೂಪʼ ಚಿತ್ರದ ಸಾಂಗ್ ಟೀಸರ್ ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಹಾಡುಗಳ ಹಬ್ಬ ಜೋರಾಗಿದೆ. ಟೀಸರ್ ಹಾಗೂ ಹಾಡುಗಳ ಮೂಲಕವೇ ಸಿನಿಪ್ರೇಕ್ಷಕರ ಗಮನ ಸೆಳೆದಿರುವ ‘ಅಪರೂಪ’ ಚಿತ್ರದ ಮತ್ತೊಂದು ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಇದಕ್ಕೂ ಮುಂಚೆ ಸಾಂಗ್ ಟೀಸರ್ ಅನ್ನು ಚಿತ್ರತಂಡ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದೆ. ‘ಲವ್ ಗೆ ನೋ ನೋ’ ಎಂಬ ಈ ಹಾಡಿಗೆ ಅನಿರುದ್ದ್ ಶಾಸ್ತ್ರಿ ಧ್ವನಿಗೂಡಿಸಿದ್ದು, ಚೇತನ್ ಕುಮಾರ್ ಸಾಹಿತ್ಯ ಪ್ರಜ್ವಲ್ ಪಾಯ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಸುಗ್ಗಿ ಸಿನಿಮಾಸ್ ಬ್ಯಾನರ್ ನಡಿ ಕೆ.ಆರ್. ಮಹೇಶ್ ನಿರ್ಮಾಣ ಮಾಡಿದ್ದು, ಸುಗೋಷ್ ಹಾಗೂ ರಿತಿಕಾ ಶ್ರೀನಿವಾಸ್ ಸೇರಿದಂತೆ ಅಶೋಕ್, ಅರುಣ ಬಾಲರಾಜ್, ಅವಿನಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...