alex Certify ಗುರುವಾರ ಅಪ್ಪಿತಪ್ಪಿಯೂ ಈ ವಸ್ತು ದಾನ ಮಾಡಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುರುವಾರ ಅಪ್ಪಿತಪ್ಪಿಯೂ ಈ ವಸ್ತು ದಾನ ಮಾಡಬೇಡಿ

ಹಿಂದೂ ಧರ್ಮದಲ್ಲಿ ಗುರುವಾರಕ್ಕೆ ವಿಶೇಷ ಮಹತ್ವವಿದೆ. ಈ ದಿನವನ್ನು ವಿಷ್ಣು ಮತ್ತು ಗುರು ಬೃಹಸ್ಪತಿಗೆ ಸಮರ್ಪಿಸಲಾಗಿದೆ. ಗುರುವಾರದಂದು ಪೂಜೆ ಮತ್ತು ಉಪವಾಸವು ಶುಭ ಫಲಿತಾಂಶ ನೀಡುತ್ತದೆ. ವಿಷ್ಣುವಿನ ಕೃಪೆಯಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಈ ದಿನ ಉಪವಾಸ ಮತ್ತು ಪೂಜೆಯ ಜೊತೆಗೆ ದಾನಕ್ಕೆ ಮಾನ್ಯತೆ ನೀಡಲಾಗಿದೆ. ಗುರುವಾರದಂದು ಬ್ರಾಹ್ಮಣರು, ಬಡವರು ಮತ್ತು ನಿರ್ಗತಿಕರಿಗೆ ದಾನ ಮಾಡುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆದ್ರೆ ಗುರುವಾರದಂದು ಕೆಲ ವಸ್ತುಗಳನ್ನು  ದಾನ ಮಾಡುವುದು ಒಳ್ಳೆಯದಲ್ಲ. ಅದ್ರಿಂದ ದುರಾದೃಷ್ಟ ನಿಮ್ಮನ್ನು ಆವರಿಸಿಕೊಳ್ಳುತ್ತದೆ.

  1. ಗುರುವಾರದಂದು ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡುವುದರಿಂದ ವಿಷ್ಣು ಪ್ರಸನ್ನನಾಗುತ್ತಾನೆ. ಆದರೆ ಈ ದಿನ ಕಪ್ಪು ವಸ್ತುಗಳನ್ನು ದಾನ ಮಾಡಬಾರದು. ಕಪ್ಪು ಬಣ್ಣದ ವಸ್ತುಗಳನ್ನು ದಾನ ಮಾಡಿದರೆ ಪೂಜೆ ಮಾಡಿದ ಫಲ ಸಿಗುವುದಿಲ್ಲ.
  2. ಅಗತ್ಯವಿರುವವರಿಗೆ ಸಹಾಯ ಮಾಡುವುದು ಒಳ್ಳೆಯದು. ಆದರೆ ಗುರುವಾರ  ಸಾಲ ನೀಡುವುದು ಒಳ್ಳೆಯದಲ್ಲ. ಗುರುವಾರ ನೀಡಿದ ಸಾಲವನ್ನು ಸುಲಭವಾಗಿ ವಸೂಲಿ ಮಾಡಲು ಸಾಧ್ಯವಿಲ್ಲ.
  3. ಗುರುವಾರದಂದು ಯಾರೂ ಕಬ್ಬಿಣದ ವಸ್ತುಗಳನ್ನು ದಾನ ಮಾಡಬಾರದು. ಹೀಗೆ ಮಾಡಿದ್ರೆ ದುರಾದೃಷ್ಟ ಪ್ರಾಪ್ತಿಯಾಗುತ್ತದೆ.
  4. ವಿಷ್ಣುವಿನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಬಳಸಲಾಗುತ್ತೆ. ಗುರುವಾರ ಯಾರಿಗೂ ತುಳಸಿ ಎಲೆಗಳನ್ನು ನೀಡಬೇಡಿ. ಇದ್ರಿಂದ ವಿಷ್ಣು ಆಶೀರ್ವಾದವನ್ನು ಕಳೆದುಕೊಳ್ಳಬೇಕಾಗುತ್ತದೆ.
  5. ಗುರುವಾರ ಹಳದಿ ಬಣ್ಣದ ವಸ್ತುವನ್ನು ದಾನ ಮಾಡಬೇಕು. ಹಾಗೆಯೇ ವಿಷ್ಣು ದೇವಸ್ಥಾನಕ್ಕೆ ಮಾವಿನ ಹಣ್ಣನ್ನು ಅರ್ಪಿಸಬೇಕು. ಗುರುವಾರದಂದು ಕುಂಕುಮವನ್ನು ದಾನ ಮಾಡಿದರೆ ವಿಷ್ಣುವಿನ ಜೊತೆಗೆ ಲಕ್ಷ್ಮಿ ಆಶೀರ್ವಾದ ಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...