alex Certify ಪ್ರತಿ ದಿನ ಈ ಕೆಲಸ ಮಾಡಿದ್ರೆ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ದಿನ ಈ ಕೆಲಸ ಮಾಡಿದ್ರೆ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಅಧ್ಯಯನದ ಪ್ರಕಾರ ಹೃದಯಾಘಾತದ ಪ್ರಮಾಣವನ್ನು ಸಂಭೋಗ ಕಡಿಮೆ ಮಾಡುತ್ತದೆ. ವಾರಕ್ಕೆರಡು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗಿಂತ, ತಿಂಗಳಿಗೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗೆ ಹೃದಯಾಘಾತವಾಗುವುದು ಜಾಸ್ತಿ.

ರೋಗದ ಸೋಂಕಿನಿಂದ ರಕ್ಷಣೆ :

ಸಂಭೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಗೆ ಮಾಡುತ್ತದೆ. ನೆಗಡಿ, ಜ್ವರದಂತಹ ಸಣ್ಣ ಪುಟ್ಟ ರೋಗದ ವಿರುದ್ದ ಹೋರಾಡಲು ದೇಹದಲ್ಲಿ ಶಕ್ತಿ ತುಂಬುತ್ತದೆ.

ಒತ್ತಡ ಕಡಿಮೆ ಮಾಡುತ್ತದೆ :

ಕೆಲಸ ಹಾಗೂ ಕೌಟುಂಬಿಕ ಒತ್ತಡ ಹೋಗಲಾಡಿಸಲು ಇದು ರಾಮಬಾಣ. ಲೈಂಗಿಕ ಕ್ರಿಯೆಯಿಂದ ಒತ್ತಡ ಕಡಿಮೆಯಾಗುತ್ತದೆ. ಮನಸ್ಸು ಉಲ್ಲಾಸಗೊಂಡು, ಸಂತೋಷ ಇಮ್ಮಡಿಗೊಳ್ಳುತ್ತದೆ ಎಂದು ಅಧ್ಯಯನ ಹೇಳುತ್ತದೆ.

ನೋವು ಶಮನ :

ತಲೆ ನೋವು ಎಂಬ ಕಾರಣಕ್ಕೆ ಲೈಂಗಿಕ ಕ್ರಿಯೆಯಿಂದ ದೂರವಿರಬೇಡಿ. ಸಂಭೋಗದಲ್ಲಿ ತೊಡಗುವುದರಿಂದ ನೋವು ನಿವಾರಣೆಯಾಗುತ್ತದೆ. ಹಾರ್ಮೋನ್ ಆಕ್ಸಿಟೋಸಿನ್ ಐದು ಪಟ್ಟು ಹೆಚ್ಚಾಗುವುದರಿಂದ ನೋವಿನ ವಿರುದ್ದ ದೇಹ ಹೋರಾಡುತ್ತದೆ.

ದೀರ್ಘಾಯುಷ್ಯ :

ದೀರ್ಘ ಆಯುಷ್ಯ ಹೊಂದಬಹುದು. ಐದು ವಾರಕ್ಕೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗಿಂತ, ವಾರಕ್ಕೆರಡು ಬಾರಿ ಲೈಂಗಿಕ ಕ್ರಿಯೆ ನಡೆಸುವ ಪುರುಷರು ಬಹುಕಾಲ ಬದುಕುತ್ತಾರಂತೆ. ಆರೋಗ್ಯಪೂರ್ಣ ಚರ್ಮಕ್ಕೆ ಇದು ಸಹಕಾರಿ.

ರಕ್ತ ಪರಿಚಲನೆ ಹೆಚ್ಚಿಸುತ್ತದೆ :

ಸಂಭೋಗದಿಂದ ಹೃದಯ ಗತಿ ಏರುತ್ತದೆ. ಹೊಸ ರಕ್ತ ನಿಮ್ಮ ಅಂಗಾಂಗ ಹಾಗೂ ಜೀವಕೋಶಗಳಿಗೆ ಸೇರುತ್ತದೆ. ರಕ್ತ ಪರಿಚಲನೆ ಹೆಚ್ಚಾಗುತ್ತದೆ.

ಉತ್ತಮ ನಿದ್ರೆ :

ಉತ್ತಮ ನಿದ್ರೆಗೆ ಸಂಭೋಗ ಸಹಕಾರಿ. ರಾತ್ರಿ ಸರಿಯಾದ ನಿದ್ರೆ ಬರುವುದರಿಂದ ಆರೋಗ್ಯ ವೃದ್ಧಿಸುತ್ತದೆ. ದೇಹಕ್ಕೆ ಉತ್ತಮ ವ್ಯಾಯಾಮ ನೀಡುತ್ತದೆ. ಅರ್ಧ ಗಂಟೆ ಸಂಭೋಗದಿಂದ 80 ರಷ್ಟು ಕ್ಯಾಲೋರಿ ಕಡಿಮೆಯಾಗುತ್ತದೆ.

(ವಿವಾಹಿತರಿಗೆ ಮಾತ್ರ)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...