ಸಾಮಾಜಿಕ ದೂರ, ಮಾಸ್ಕ್ ಬಳಕೆ ಸೇರಿದಂತೆ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳೋದ್ರಿಂದ ಶಾಲೆಗಳಲ್ಲಿ ಕೊರೊನಾ ವೈರಸ್ ಅಷ್ಟೊಂದು ವೇಗವಾಗಿ ಹರಡೋದಿಲ್ಲ. ಆದರೆ ಒಳಾಂಗಣ ಕ್ರೀಡಾ ಚಟುವಟಿಕೆಯನ್ನ ತಪ್ಪಿಸೋದೇ ಒಳ್ಳೆಯದು ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ .
ಅಮೆರಿಕದ ಕಾಯಿಲೆ ನಿಯಂತ್ರಣ ಹಾಗೂ ಪರಿಹಾರ ಕೇಂದ್ರ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಅಮೆರಿಕದ ಕೆಲ ಭಾಗಗಳಲ್ಲಿ ಹಾಗೂ ಜಗತ್ತಿನ ವಿವಿಧೆಡೆಯಲ್ಲಿ ಕೊರೊನಾದ ಬಳಿಕ ಒಂದೊಂದಾಗಿಯೇ ಶಾಲಾ – ಕಾಲೇಜುಗಳು ಆರಂಭವಾಗುತ್ತಿದೆ.
ಕೊರೊನಾ ಲಸಿಕೆ ಪಡೆಯಲು ಹೋಗಿ ಕೆಲಸ ಕಳೆದುಕೊಂಡ ಪ್ರತಿಷ್ಠಿತ ಕಂಪನಿ ಸಿಇಓ….!
ಹೀಗಾಗಿ ಪ್ರತಿಯೊಂದು ಶಾಲೆಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆಯ ಜೊತೆಗೆ ಕೊಠಡಿಯೊಳಗೆ ಜನಸಾಂದ್ರತೆಯನ್ನ ಹೆಚ್ಚಿಸುವ ಒಳಾಂಗಣ ಆಟಗಳು, ಸಾಂಸ್ಕೃತಿಕ ಚಟುವಟಿಕೆಗಳನ್ನ ನಿಯಂತ್ರಿಸಬೇಕು ಎಂದು ಹೇಳಿದೆ. ಇದರ ಜೊತೆಯಲ್ಲಿ ತರಗತಿಗಳು ನಡೆಯುವ ಕೊಠಡಿಗಳಲ್ಲಿ ಗಾಳಿ ಸಂಚರಿಸಲು ಅವಕಾಶ ನೀಡಿ. ಹಾಗೂ ಸೌಮ್ಯ ಲಕ್ಷಣಗಳಿದ್ದರೂ ಅಂತವರನ್ನ ಪ್ರತ್ಯೇಕವಾಗಿಯೇ ಇಡಿ ಎಂದು ಹೇಳಿದೆ.