alex Certify ಕೊರೊನಾ ಲಸಿಕೆ ಪಡೆಯಲು ಹೋಗಿ ಕೆಲಸ ಕಳೆದುಕೊಂಡ ಪ್ರತಿಷ್ಠಿತ ಕಂಪನಿ ಸಿಇಓ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಪಡೆಯಲು ಹೋಗಿ ಕೆಲಸ ಕಳೆದುಕೊಂಡ ಪ್ರತಿಷ್ಠಿತ ಕಂಪನಿ ಸಿಇಓ….!

ಗ್ರೇಟ್​​ ಕೆನಡಿಯನ್ ಗೇಮಿಂಗ್​ ಫರ್ಮ್​ನ​ ಸಿಇಓ ರೋಡ್​ ಬೇಕರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೊರೊನಾ ಲಸಿಕೆಯ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಕೆನಡಾ ಉತ್ತರ ಭಾಗಕ್ಕೆ ಬೇಕರ್​ ದಂಪತಿ ಪ್ರಯಾಣ ಬೆಳೆಸಿ ಕೊರೊನಾ ಲಸಿಕೆ ಪಡೆದ ಹಿನ್ನೆಲೆ ಈ ದಂಡ ತೆರಬೇಕಾಗಿ ಬಂದಿದೆ.

ರೋಡ್​ ಬೇಕರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿ ಅಧಿಕೃತ ಮಾಹಿತಿ ನೀಡಿದೆ. ಅಲ್ಲದೇ ವೈಯಕ್ತಿಕ ವಿಚಾರಗಳ ಬಗ್ಗೆ ಯಾವುದೇ ರೀತಿಯ ಹೇಳಿಕೆಗಳನ್ನ ನೀಡೋದಿಲ್ಲ ಎಂದೂ ಹೇಳಿದೆ.

55 ವರ್ಷದ ಬೇಕರ್​​ ಹಾಗೂ ಅವರ ಪತ್ನಿ 32 ವರ್ಷದ ಎಕಟೆರಿನಾ ಬೇಕರ್​ ಉತ್ತರ ಕೊರಿಯಾದ ಯುಕೋನ್​ ಪ್ರಾಂತ್ಯಕ್ಕೆ ಭೇಟಿ ನೀಡಿದ್ದರು. ಅಲ್ಲದೇ ಈ ಪ್ರಾಂತ್ಯದಲ್ಲಿ ತಮ್ಮನ್ನ ತಾವು ಸ್ಥಳೀಯ ಕೆಲಸಗಾರರೆಂದು ಗುರುತಿಸಿಕೊಳ್ಳುವ ಮೂಲಕ ಕೊರೊನಾ ಲಸಿಕೆಯನ್ನ ಪಡೆದಿದ್ದಾರೆ. ಅಲ್ಲದೇ ಯುಕೋನ್​ನಿಂದ ವಾಪಸ್ಸಾದ ಬಳಿಕ 14 ದಿನಗಳ ಕಡ್ಡಾಯ ಕ್ವಾರಂಟೈನ್​ಗೆ ಒಳಗಾಗದ ಕಾರಣ ತಲಾ 902.60 ಡಾಲರ್​ ಹಣವನ್ನ ದಂಡ ವಿಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...