alex Certify ಕಿಸ್ಸಿಂಗ್ ಡೇ: ಸಂಬಂಧವನ್ನು ಗಟ್ಟಿಗೊಳಿಸುತ್ತೆ ಈ ಮುತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಸ್ಸಿಂಗ್ ಡೇ: ಸಂಬಂಧವನ್ನು ಗಟ್ಟಿಗೊಳಿಸುತ್ತೆ ಈ ಮುತ್ತು

ನಾಳೆ ಫೆಬ್ರವರಿ 14, ಪ್ರೇಮಿಗಳ ದಿನ. ಪ್ರೇಮಿಗಳ ವಾರದಲ್ಲಿ ಒಂದೊಂದು ದಿನ ಒಂದೊಂದಕ್ಕೆ ಸೀಮಿತವಾಗಿದೆ. ಇಂದು ಕಿಸ್ಸಿಂಗ್ ಡೇ ಆಚರಿಸಲಾಗ್ತಿದೆ. ಪ್ರೀತಿ, ಮಮತೆ, ವಾತ್ಸಲ್ಯ ಎಲ್ಲವನ್ನೂ ವ್ಯಕ್ತಪಡಿಸಲು ಮುತ್ತು ಒಳ್ಳೆಯ ಮಾರ್ಗ. ದೇಹದ ಬೇರೆ ಬೇರೆ ಭಾಗದಲ್ಲಿ ಇಡುವ ಮುತ್ತಿಗೆ ಬೇರೆ ಬೇರೆ ಅರ್ಥವಿದೆ.

ಕೆನ್ನೆಗೆ ಮುತ್ತಿಡುವುದು ಸ್ನೇಹದ ಸಂಕೇತ. ಸಹಕಾರ ಹಾಗೂ ಪರಿಪೂರ್ಣತೆಯನ್ನು ಇದು ತೋರಿಸುತ್ತದೆ. ಇದು ಆಕರ್ಷಣೆಯ ಸಂಕೇತವೂ ಹೌದು.

ತುಟಿಗೆ ಮುತ್ತಿಡುವುದು ಉತ್ಸಾಹವನ್ನು ತೋರಿಸುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸಲು ಇದು ಉತ್ತಮ ಮಾರ್ಗವಾಗಿದೆ.

ಕುತ್ತಿಗೆ ಮೇಲೆ ಮುತ್ತಿಡುವುದು ಅನ್ಯೂನ್ಯತೆಯನ್ನು ಸೂಚಿಸುತ್ತದೆ. ದೈಹಿಕ ಆಕರ್ಷಣೆಯನ್ನು ತೋರಿಸಲು ಇದು ಒಳ್ಳೆಯ ವಿಧಾನವಾಗಿದೆ.

ಪ್ರೇಮಿಗಳ ದಿನಕ್ಕಿಂತ ಮೊದಲೇ ಕೆಂಪು ಡ್ರೆಸ್ ನಲ್ಲಿ ಮಿಂಚಿದ ಸಾಕ್ಷಿ ಧೋನಿ

ಲೈಂಗಿಕ ಆಸಕ್ತಿಯನ್ನು ವ್ಯಕ್ತಪಡಿಸಲು ಕಿವಿಗೆ ಮುತ್ತಿಡಲಾಗುತ್ತದೆ. ಆದ್ರೆ ಇದು ಚುಂಬಿಸುವವರ ಮೇಲೆ ಅವಲಂಭಿಸಿರುತ್ತದೆ.

ಕೈಗಳಿಗೆ ಮುತ್ತಿಡುವುದು ನಂಬಿಕೆಯ ಸಂಕೇತವಾಗಿದೆ. ಹಣೆಯ ಮೇಲೆ ಮುತ್ತಿಡುವುದು ಭಾವನಾತ್ಮಕ ಕ್ಷಣದ ಸಂಕೇತವಾಗಿದೆ.

ಬೇರೆ ಬೇರೆ ಅಂಗಗಳಿಗೆ ಮುತ್ತಿಟ್ಟರೆ ಬೇರೆ ಬೇರೆ ಅರ್ಥವಿದೆ ನಿಜ. ಆದ್ರೆ ಮುತ್ತಿಡುವ ವ್ಯಕ್ತಿಯ ಭಾವನೆಯನ್ನು ಇದು ಮುಖ್ಯವಾಗಿ ಅವಲಂಭಿಸಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...