alex Certify ಪ್ರೇಮಿಗಳ ದಿನಕ್ಕಿಂತ ಮೊದಲೇ ಕೆಂಪು ಡ್ರೆಸ್ ನಲ್ಲಿ ಮಿಂಚಿದ ಸಾಕ್ಷಿ ಧೋನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಮಿಗಳ ದಿನಕ್ಕಿಂತ ಮೊದಲೇ ಕೆಂಪು ಡ್ರೆಸ್ ನಲ್ಲಿ ಮಿಂಚಿದ ಸಾಕ್ಷಿ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಪತ್ನಿ ಸಾಕ್ಷಿ ಧೋನಿ ಸದ್ಯ ಮುಂಬೈನಲ್ಲಿದ್ದಾರೆ. ಧೋನಿ ಎಂಟರ್ಟೈನ್ ಮೆಂಟ್ ಹೆಸರಿನ ಕಂಪನಿಯನ್ನು ಧೋನಿ ಶುರು ಮಾಡಿದ್ದಾರೆ. ಈ ಪ್ರೊಡಕ್ಷನ್ ಹೌಸ್ ವ್ಯವಸ್ಥಾಪಕ ನಿರ್ದೇಶಕರಾಗಿ ಸಾಕ್ಷಿ ಧೋನಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಕೆಲಸದ ಮೇಲೆ ಮುಂಬೈಗೆ ಬಂದಿರುವ ಸಾಕ್ಷಿ ಧೋನಿ, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.

ಸಾಕ್ಷಿ ಧೋನಿ, ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. ಪ್ರೇಮಿಗಳ ದಿನಕ್ಕೆ ಒಂದು ದಿನವಿರುವಾಗ ಸಾಕ್ಷಿ ಹಂಚಿಕೊಂಡಿರುವ ಫೋಟೋ ಸುದ್ದಿ ಮಾಡಿದೆ. ಕೆಂಪು ಬಟ್ಟೆ ಧರಿಸಿರುವ ಸಾಕ್ಷಿ ತುಂಬ ಸುಂದರವಾಗಿ ಕಾಣ್ತಿದ್ದಾರೆ. ಫೋಟೋ ಹಂಚಿಕೊಂಡಿರುವ ಸಾಕ್ಷಿ, ಫೀಲಿಂಗ್ ರೆಡ್ ಎಂದು ಬರೆದುಕೊಂಡಿದ್ದಾರೆ.

ನರೇಗಾ ಯೋಜನೆ ಫಲಾನುಭವಿಗಳಿಗೆ ಶಾಕ್: ಕೆಲಸದ ದಿನ ವಿಸ್ತರಣೆ ಇಲ್ಲ

ಸಾಕ್ಷಿ ಧೋನಿ ಈ ಫೋಟೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ, ಪಂಕುಡಿ ಶರ್ಮಾ, ಬಿಪಾಶಾ ಬಸು ಸೇರಿದಂತೆ ಅನೇಕರು ಫೋಟೋಕ್ಕೆ ಕಮೆಂಟ್ ಮಾಡಿದ್ದಾರೆ.

ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಧೋನಿ ತಮ್ಮ ಕೆಲಸದ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಧೋನಿ ತರಕಾರಿ ಬೆಳೆಯುವ ಜೊತೆಗೆ ನಿರ್ಮಾಣ ಕಂಪನಿ ಶುರು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...