alex Certify ವಿಶ್ವವನ್ನೇ ನಿಬ್ಬೆರಗಾಗಿಸಿದ ‘ಇಸ್ರೋ’ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವವನ್ನೇ ನಿಬ್ಬೆರಗಾಗಿಸಿದ ‘ಇಸ್ರೋ’ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ

ತನ್ನ ಸಾಧನೆಗಳ ಮೂಲಕ ವಿಶ್ವವನ್ನೇ ನಿಬ್ಬೆರಗಾಗಿಸಿರುವ ಇಸ್ರೋ ಈಗ ಜಗತ್ತಿನಾದ್ಯಂತ ಮನೆಮಾತಾಗಿದೆ. ಭಾರತದ ಉಪಗ್ರಹದ ಕನಸಿನೊಂದಿಗೆ ಇಸ್ರೋ ಉದಯವಾಗಿದ್ದು 1962ರಲ್ಲಿ. ಅಹಮದಾಬಾದ್ನಲ್ಲಿ ವಿಕ್ರಂ ಸಾರಾಭಾಯ್ ಅವರ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ ಸಭೆಯಲ್ಲಿ ಉಪಗ್ರಹಗಳ ಕನಸು ಹುಟ್ಟಿಕೊಂಡಿತ್ತು.

isro-1

ವಿಜ್ಞಾನಿಗಳಾದ ಡಾ.ಪ್ರಫುಲ್ ಭವ್ಸರ್, ಡಾ.ಸತ್ಯ ಪ್ರಕಾಶ್ ಮತ್ತು ಪ್ರೊಫೆಸರ್ ಯುಡಿ ದೇಸಾಯಿ ಆ ಸಭೆಯಲ್ಲಿ ಪಾಲ್ಗೊಂಡಿದ್ರು. ವಿಕ್ರಂ ಸಾರಾಭಾಯ್ ಆಗ ವಿಶ್ವಸಂಸ್ಥೆಯ ನೆರವು ಕೇಳಿದ್ರು.‌

ತ್ರಿವೆಂಡ್ರಮ್ನಲ್ಲಿ ಥುಂಬಾ ಉಪಗ್ರಹ ಉಡಾವಣಾ ಕೇಂದ್ರ ಸ್ಥಾಪಿಸಲು ವಿಶ್ವಸಂಸ್ಥೆ ಸಹಾಯ ಹಸ್ತ ನೀಡಿತ್ತು. 1963ರಲ್ಲಿ ಭಾರತದ ಮೊದಲ ಉಪಗ್ರಹ ಉಡಾವಣೆಯ ಜವಾಬ್ಧಾರಿ ಹೊತ್ತವರು ಪ್ರೊಫೆಸರ್ ಪ್ರಫುಲ್ ಭವ್ಸರ್ ಹಾಗೂ ಡಾ.ಜಿ.ಎಸ್. ಮೂರ್ತಿ. 1963ರ ನವೆಂಬರ್ 21ರಂದು 725 ಕೆಜಿ ತೂಕದ Nike-Apache ಉಪಗ್ರಹ ನಭಕ್ಕೆ ಜಿಗಿದಿತ್ತು.

isro-3

ಗಂಟೆಗೆ 3,800 ಕಿಮೀ ವೇಗದಲ್ಲಿ ಸಾಗಿತ್ತು. ತಂತ್ರಜ್ಞಾನ, ವೈಜ್ಞಾನಿಕ ಕ್ಷೇತ್ರದ ಬೆಳವಣಿಗೆ, ಮಾಹಿತಿ ಪ್ರಸಾರ, ಪರಮಾಣು ಶಕ್ತಿಯ ಮೂಲಕ ದೇಶದ ಬಡತನವನ್ನು ಹೋಗಲಾಡಿಸಬೇಕೆಂಬುದು ವಿಕ್ರಂ ಸಾರಾಭಾಯ್ ಅವರ ಕನಸಾಗಿತ್ತು.

ಎಲ್ಲ ವಿಜ್ಞಾನಿಗಳ ಶ್ರಮದ ಫಲವಾಗಿ 1967ರ ನವೆಂಬರ್ 20ರಂದು ಭಾರತ ತನ್ನ ಮೊದಲ ದೇಶೀ ನಿರ್ಮಿತ ಉಪಗ್ರಹ ರೋಹಿಣಿ RH-75 ಅನ್ನು ಉಡಾವಣೆ ಮಾಡಿತ್ತು. ಅದಾದ್ಮೇಲೆ ಭಾರತ ಬಾಹ್ಯಾಕಾಶ ಕೇಂದ್ರದಲ್ಲಿ ಹಿಂತಿರುಗಿ ನೋಡಲಿಲ್ಲ. ಇದೀಗ ಇಡೀ ವಿಶ್ವವೇ ನಿಬ್ಬೆರಗಾಗುವಂತಹ ಅಸಾಮಾನ್ಯ ಸಾಧನೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...