alex Certify ಹೊಳೆಯುವ ಮೈಕಾಂತಿಗಾಗಿ ಈ ಯೋಗಾಸನಗಳನ್ನು ಅಭ್ಯಾಸ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಳೆಯುವ ಮೈಕಾಂತಿಗಾಗಿ ಈ ಯೋಗಾಸನಗಳನ್ನು ಅಭ್ಯಾಸ ಮಾಡಿ

ಚರ್ಮವು ಆರೋಗ್ಯವಾಗಿದ್ದರೆ ನಿಮ್ಮ ಸೌಂದರ್ಯ ಎದ್ದು ಕಾಣುತ್ತದೆ. ಒಂದು ವೇಳೆ ಮುಖದ ಚರ್ಮದಲ್ಲಿ ಮೊಡವೆ, ಗುಳ್ಳೆಗಳು, ಕಪ್ಪು ಕಲೆಗಳು ಕಂಡುಬಂದರೆ ಮುಖದ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಹೊಳೆಯುವ ಚರ್ಮವನ್ನು ಪಡೆಯಲು ನೀವು ಹಣ್ಣುಗಳು, ತರಕಾರಿಗಳು, ಪ್ರೋಟೀನ್ ಗಳನ್ನು ಸೇವಿಸಬೇಕು. ಹಾಗೇ ಅದರ ಜೊತೆಗೆ ಈ ಯೋಗಗಳನ್ನು ಅಭ್ಯಾಸ ಮಾಡಿ. ಇದರಿಂದ ಹೊಳೆಯುವ ಮೈಕಾಂತಿಯನ್ನು ಪಡೆಯಬಹುದು.

*ಸರ್ವಂಗಾಸನ : ಈ ಭಂಗಿಯು ಮುಖದ ಕಡೆಗೆ ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ. ಇದು ಚರ್ಮದ ವಿನ್ಯಾಸ ಮತ್ತು ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮದಿಂದ ಗುಳ್ಳೆ, ಮೊಡವೆ, ಸುಕ್ಕುಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

*ಹಲಾಸನ : ಈ ಯೋಗಾಸನವು ಹೊಳೆಯುವ ಮತ್ತು ಆರೋಗ್ಯಕರ ಚರ್ಮಕ್ಕೆ ಅಗತ್ಯವಾದ ನಿಮ್ಮ ಜೀರ್ಣ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

*ಉತ್ತನಾಸನ : ಈ ಭಂಗಿಯಲ್ಲಿ ಮುಂದಕ್ಕೆ ಭಾಗುವುದರಿಂದ ಮುಖಕ್ಕೆ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಮತ್ತು ಚರ್ಮದ ಕೋಶಗಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ. ಇದು ಚರ್ಮದ ಕೋಶಗಳಿಗೆ ಸಹಾಯಕವಾದ ಪೋಷಕಾಂಶಗಳ ಸಾಗಣೆಯನ್ನು ಉತ್ತೇಜಿಸುತ್ತದೆ. ಇದು ಚರ್ಮದ ನವಯೌವ್ವನ ಪಡೆಯುವುದನ್ನು ಉತ್ತೇಜಿಸುತ್ತದೆ.

*ಮತ್ಸ್ಯಾಸನ : ಇದು ಥೈರಾಯ್ಡ್, ಫಿನಲ್ ಮತ್ತು ಪಿಟ್ಯುಟರಿ ಗ್ರಂಥಿಗಳ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇವೆಲ್ಲವೂ ಆರೋಗ್ಯಕರವಾದ ಚರ್ಮದ ರಚನೆಗೆ ಕಾರಣವಾಗುತ್ತದೆ.

*ಭುಜಂಗಾಸನ : ಇದು ಉದ್ವೇಗ, ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಚರ್ಮದ ಜೀವಕೋಶಗಳಿಗೆ ಹೆಚ್ಚವರಿ ಆಮ್ಲಜನಕವನ್ನು ಪೂರೈಸುವ ಮೂಲಕ ನಿಮ್ಮ ಚರ್ಮವನ್ನು ಕಾಂತಿಗೊಳಿಸಲು ಸಹಾಯ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...