alex Certify ರಾತ್ರಿ ಚೆನ್ನಾಗಿ ನಿದ್ರೆ ಬರಲು ಈ ಮಾರ್ಗ ಅನುಸರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಚೆನ್ನಾಗಿ ನಿದ್ರೆ ಬರಲು ಈ ಮಾರ್ಗ ಅನುಸರಿಸಿ

ನಿದ್ರೆ ಆರೋಗ್ಯಕ್ಕೆ ತುಂಬಾ ಉತ್ತಮ. ಕೆಲಸದ ಒತ್ತಡ, ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಅಂತವರಿಗೆ ರಾತ್ರಿ ಚೆನ್ನಾಗಿ, ಬಹಳ ಬೇಗ ನಿದ್ರೆ ಬರಬೇಕೆಂದರೆ ಈ ಮಾರ್ಗಗಳನ್ನು ಅನುಸರಿಸಿ.

*ಟಿವಿ ಹಾಗೂ ಮೊಬೈಲ್ ನಲ್ಲಿ ಬರುವ ಬ್ಲೂ ಲೈಟ್ ನಿಮ್ಮ ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಿದ್ರೆ ಬರುವುದಿಲ್ಲ. ಆದಕಾರಣ ನಿದ್ರೆ ಮಾಡುವುದಕ್ಕೆ 2 ಗಂಟೆಗಳ ಮೊದಲು ಇವುಗಳನ್ನು ವೀಕ್ಷಣೆ ಮಾಡುವುದನ್ನು ನಿಲ್ಲಿಸಿ. ಅಥವಾ ಕನ್ನಡಕ ಬಳಸಿ.

* ಬೆಳಿಗ್ಗೆ ಬೇಗನೆ ಎದ್ದೇಳಿ. ಮತ್ತು ದೇಹವನ್ನು ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳಿ. ಇದರಿಂದ ನಿದ್ರೆಯ ಗುಣಮಟ್ಟ ಹೆಚ್ಚುತ್ತದೆ. ಹಾಗೇ ಸಾಧ್ಯವಾದರೆ ಹಗಲಿನಲ್ಲಿ ಕಿರು ನಿದ್ರೆ ಮಾಡುವುದನ್ನು ತಪ್ಪಿಸಿ.

*ರಾತ್ರಿಯ ವೇಳೆ ಜಾಸ್ತಿ ಊಟ ಸೇವಿಸುವುದು ಮತ್ತು ನೀರು ಕುಡಿಯುವುದನ್ನು ತಪ್ಪಿಸಿ. ಇಲ್ಲವಾದರೆ ಪದೇ ಪದೇ ಎಚ್ಚರವಾಗಿ ನಿದ್ರೆಗೆ ಭಂಗ ಉಂಟಾಗುತ್ತದೆ. ನಿದ್ರೆ ಸರಿಯಾಗಿ ಬರಲು ಪ್ರತಿದಿನ ವ್ಯಾಯಾಮ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...