alex Certify ರಂಪಾಟ ಮಾಡುವ ಮಕ್ಕಳನ್ನು ಸಂಭಾಳಿಸುವುದು ಈಗ ಕಷ್ಟವಲ್ಲ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಂಪಾಟ ಮಾಡುವ ಮಕ್ಕಳನ್ನು ಸಂಭಾಳಿಸುವುದು ಈಗ ಕಷ್ಟವಲ್ಲ….!

What can I Do if my Child Doesn't Want to go Back to School? - AsIAm.ie

ಮಕ್ಕಳು ಉಪಟಳ ಕೊಡುವುದು ಇದ್ದದ್ದೇ. ಹಾಗೆಂದು ನೀವು ತಾಳ್ಮೆ ಕಳೆದುಕೊಳ್ಳದಿರಿ. ಮಕ್ಕಳನ್ನು ಶಾಂತಗೊಳಿಸುವ ಸುಲಭವಾಗಿ ನಿಭಾಯಿಸುವ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ.

ಮಕ್ಕಳು ಸಿಟ್ಟಾದರು, ತಪ್ಪು ಮಾಡಿದರು ಎಂಬ ಕಾರಣಕ್ಕೆ ಒಂದೇ ಬಾರಿ ಕೂಗಿ ಹೊಡೆದು ಬಡಿದು ಮಾಡದಿರಿ. ಸ್ವಲ್ಪ ಹೊತ್ತು ತಾಳ್ಮೆಯಿಂದ ಪರಿಸ್ಥಿತಿ ಅವಲೋಕಿಸಿ. ಮಕ್ಕಳೊಂದಿಗೆ ಮಾತನಾಡಿ. ಯಾಕೆ ಹಾಗೆ ಮಾಡಿದ್ದಿ ಎಂದು ಕಾರಣ ಕೇಳಿ. ಮಕ್ಕಳಿಗೆ ರಂಪಾಟ ಮಾಡಿದರೆ ಏನೆಲ್ಲಾ ತೊಂದರೆ ಆಗುತ್ತದೆ ಎಂಬುದನ್ನು ವಿವರಿಸಿ.

ಮನೆಯಲ್ಲಿ ಮಕ್ಕಳು ಬಯಸುವುದು ಅವರ ಮೇಲೆ ಗಮನ ಹರಿಸುವುದನ್ನು ಮಾತ್ರ. ಮಕ್ಕಳು ಪೋಷಕರಿಂದ ಹೆಚ್ಚಿನದೇನನ್ನೂ ಬಯಸುವುದಿಲ್ಲ. ಅವರಾಡುವ ಮಾತುಗಳನ್ನು ಕೇಳಿಸಿಕೊಂಡರೆ ಸಾಕು, ಹಾಗಾಗಿ ದಿನದಲ್ಲಿ ಹತ್ತು ನಿಮಿಷ ಮಕ್ಕಳೊಂದಿಗೆ ಮಾತನಾಡಲು ಮೀಸಲಿಡಿ.

ಅದು ಮುಟ್ಟಬೇಡ, ಇದು ಮಾಡಬೇಡ ಎಂದು ಅವರನ್ನು ದೂರವಿಡಬೇಡಿ. ಅವರನ್ನೂ ನಿಮ್ಮ ಕೆಲಸಕ್ಕೆ ಸೇರಿಸಿಕೊಳ್ಳಿ. ಸಣ್ಣ ಪುಟ್ಟ ಕೆಲಸ ಹೇಳಿಕೊಡಿ. ಪಾತ್ರ ಜೋಡಿಸುವ ಕೆಲಸ ಕಲಿತರೆ ಮಕ್ಕಳಿಗೂ ಖುಷಿ. ನಿಮ್ಮ ಕೆಲಸವೂ ಬೇಗ ಮುಗಿಯುತ್ತದೆ ಅಲ್ಲವೇ?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...