alex Certify ಬೋರೆ ಹಣ್ಣಿನಲ್ಲಿದೆ ಬುದ್ಧಿಶಕ್ತಿ ಹೆಚ್ಚಿಸುವ ಕೀಲಿಕೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೋರೆ ಹಣ್ಣಿನಲ್ಲಿದೆ ಬುದ್ಧಿಶಕ್ತಿ ಹೆಚ್ಚಿಸುವ ಕೀಲಿಕೈ

ಇದೊಂದು ಬೇಲಿಯಲ್ಲಿ ಬೆಳೆಯುವ ಹಣ್ಣು. ಕನ್ನಡದಲ್ಲಿ ಬುತ್ತಲೇ/ಬೋರೆ ಹಣ್ಣು ಎಂಬ ಹೆಸರು ಇದಕ್ಕಿದೆ. ಜಾನಿ ಮರ ಎಂದೂ ಕರೆಯುತ್ತಾರೆ.

ಈ ಹಣ್ಣು ವಿಟಮಿನ್ ಎ ವಿಟಮಿನ್ ಸಿ ಹಾಗೂ ಅಪಾರ ಪ್ರಮಾಣದ ಕಬ್ಬಿಣದ ಅಂಶವನ್ನು ಹೊಂದಿದೆ. ರಕ್ತದ ವೃದ್ಧಿಗೆ ಇದು ಅತ್ಯದ್ಭುತವಾಗಿ ಕೆಲಸ ಮಾಡುತ್ತದೆ. ಹಾಗೇನೇ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ಮಕ್ಕಳಲ್ಲಿ ಮಾನಸಿಕ ಬೆಳವಣಿಗೆ, ನರಮಂಡಲಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಈ ಹಣ್ಣು ತುಂಬಾ ಉಪಕಾರಿ. ಈ ಹಣ್ಣು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉತ್ತಮ ಫಲಿತಾಂಶವನ್ನು ಕೊಡುತ್ತದೆ ಇದರ ಸೇವನೆಯಿಂದ ಮಂಡಿ ನೋವು, ಕೀಲು ನೋವು ಕಡಿಮೆ ಆಗುತ್ತವೆ. ರಕ್ತದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚು ಮಾಡಿ, ಮಂಡಿ ಸವೆತ ಉಂಟಾಗದಂತೆ ಈ ಹಣ್ಣು ಕಾಪಾಡುತ್ತದೆ.

ಹಿಮೊಗ್ಲೋಬಿನ್​ ಸಮಸ್ಯೆಯಿಂದ ಬಳಲುತ್ತಿದ್ದೀರಾ….? ಈ ‘ಆಹಾರ’ ಸೇವಿಸಿ

ಉಷ್ಣ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರೆ ಇದನ್ನು ಮರೆಯದೆ ತಿನ್ನಿ. ಇದು ನಿಮ್ಮ ದೇಹವನ್ನು ತಂಪಾಗಿಸುತ್ತದೆ. ಹಾಗೇನೇ ಈ ಹಣ್ಣಿನ ರಸವನ್ನು ಗಾಯಗಳಿಗೆ ಹಚ್ಚಿದರೆ ತುರಿಕೆ ಅಥವಾ ಉರಿ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...