alex Certify ಬಾಳೆಹಣ್ಣು ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಳೆಹಣ್ಣು ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಬಾಳೆಹಣ್ಣಿನ ಉಪಯೋಗಗಳು ಒಂದೆರಡಲ್ಲ. ಅದನ್ನು ಯಾರು ಹೇಗೆ ಸೇವಿಸಬೇಕು ಎಂಬುದನ್ನು ತಿಳಿಯೋಣ. ಮಲಬದ್ಧತೆ ಸಮಸ್ಯೆ ಇರುವವರು ಪ್ರತಿದಿನ ಒಂದು ಬಾಳೆಹಣ್ಣನ್ನು ಸೇವಿಸಬೇಕು. ಉಷ್ಣ ದೇಹದವರಿಗೆ ಇದು ಅತ್ಯುತ್ತಮ ಹಣ್ಣು ಎನ್ನಬಹುದು. ಬಾಳೆಹಣ್ಣು ಉತ್ತಮ ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಬಾಳೆಹಣ್ಣನ್ನು ಮೊದಲು ಆಗ್ನೇಯ ಏಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಬೆಳೆಯಲಾಯಿತು. ಬಾಳೆಹಣ್ಣಿನಲ್ಲಿ 74% ರಷ್ಟು ನೀರು ಹಾಗೂ 20% ರಷ್ಟು ಸಕ್ಕರೆ 2% ರಷ್ಟು ಪ್ರೊಟೀನ್ ಮತ್ತು 1.7% ರಷ್ಟು ಜಿಡ್ಡು ಪದಾರ್ಥ ಮತ್ತು 1% ರಷ್ಟು ಸೆಲ್ಲಿಲೋಸ್ ಇರುತ್ತವೆ.

ಈ ಹಣ್ಣಿನಲ್ಲಿ ಎ, ಸಿ, ಬಿ1, ಬಿ2 ವಿಟಮಿನ್ ಗಳು ಇರುತ್ತವೆ. ಬಾಳೆಹಣ್ಣನ್ನು ಒಣಗಿಸಿ ಹಿಟ್ಟು ತಯಾರಿಸುತ್ತಾರೆ. ಬಾಳೆಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ಸಣ್ಣಗೆ ಇರುವವರು ತೂಕ ಹೆಚ್ಚಿಸಿಕೊಳ್ಳಬಹುದು. ನಿಯಮಿತವಾಗಿ ಬಾಳೆಹಣ್ಣು ಸೇವಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

ರಾತ್ರಿ ಸಮಯ ಬಾಳೆಹಣ್ಣು ತಿನ್ನದಿರಿ. ಮಧ್ಯಾಹ್ನ ಊಟದ ಬಳಿಕ ತಿನ್ನುವುದು ಹೆಚ್ಚು ಸೂಕ್ತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...