alex Certify ಇವೆಲ್ಲಾ ವೇಸ್ಟ್ ಅಲ್ಲವೇ ಅಲ್ಲ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವೆಲ್ಲಾ ವೇಸ್ಟ್ ಅಲ್ಲವೇ ಅಲ್ಲ…!

ಅಡುಗೆ ಮನೆಯಲ್ಲಿ ಅನಗತ್ಯ ಎನಿಸುವ ಹಲವು ವಸ್ತುಗಳನ್ನು ನಾವು ಕಸದ ತಿಪ್ಪೆಗೆ ಎಸೆದು ಬಿಡುತ್ತೇವೆ. ಅದನ್ನು ಈ ರೀತಿ ಬಳಸುವ ಮೂಲಕ ಸದುಪಯೋಗ ಮಾಡಿಕೊಳ್ಳಬಹುದು. ಅದು ಹೇಗೆ ಎನ್ನುತ್ತೀರಾ..?

ಚಹಾ ಕುಡಿಯಲು ನೀವು ಅದರ ಎಲೆಗಳನ್ನು ಬಳಸುವವರೇ? ಹಾಗಿದ್ದರೆ ಒಮ್ಮೆ ಸೋಸಿ ಉಳಿದ ಎಲೆಗಳನ್ನು ಎಸೆಯದಿರಿ. ನಿಮ್ಮ ಮನೆಯಂಗಳದಲ್ಲಿರುವ ಹೂಕುಂಡಗಳಿಗೆ ಇದನ್ನು ಹಾಕಿ. ಅವುಗಳ ಬೆಳವಣಿಗೆಗೆ ಬೇಕಾದ ಹಲವು ಪೌಷ್ಠಿಕ ಅಂಶಗಳು ಈ ಸೊಪ್ಪಿನಲ್ಲಿವೆ.

ಬಾಳೆಹಣ್ಣು ಕಪ್ಪಾದರೆ ಮಕ್ಕಳು ಬಿಡಿ, ನಮಗೂ ಅದನ್ನು ತಿನ್ನಲು ಮನಸ್ಸಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಅದರಿಂದ ಬನ್ಸ್ ತಯಾರಿಸಬಹುದು. ಇಲ್ಲವೇ ಬಾಳೆಹಣ್ಣಿನ ಸ್ಮೂಥಿ, ಜ್ಯೂಸ್ ತಯಾರಿಸಬಹುದು. ತುಸು ಐಸ್ ಕ್ರೀಮ್ ಬೆರೆಸಿ ಕೊಟ್ಟರೆ ಮಕ್ಕಳೂ ಇಷ್ಟಪಡುತ್ತಾರೆ.

ಬ್ರೆಡ್ ಉಳಿದರೆ ಇದರಿಂದ ಹಲವು ಬಗೆಯ ಸ್ವೀಟ್ ಗಳನ್ನು ತಯಾರಿಸಬಹುದು. ಶಾಹಿ ಟುಕ್ಡಾ, ಬ್ರೆಡ್ ಗುಲಾಬ್ ಜಾಮೂನ್, ಬ್ರೆಡ್ ಹಲ್ವಾ ಮಾಡಿ ತಿನ್ನಿ. ಬ್ರೆಡ್ ಮಸಾಲೆಯನ್ನೂ ರುಚಿಕರವಾಗಿ ತಯಾರಿಸಬಹುದು.

ಹಾಗೆ ನಾವು ಈಗಾಗಲೇ ಹೇಳಿದಂತೆ ಕಿತ್ತಳೆ ಸಿಪ್ಪೆ, ನಿಂಬೆ ಸಿಪ್ಪೆ, ಈರುಳ್ಳಿ ಸಿಪ್ಪೆ, ಬಳಸಿ ಸೌಂದರ್ಯ, ಆರೋಗ್ಯ ಉತ್ತಮಗೊಳಿಸಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...