alex Certify ಮನೆಯಲ್ಲೆ ಸುಲಭವಾಗಿ ಮಾಡಿ ಕಚೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೆ ಸುಲಭವಾಗಿ ಮಾಡಿ ಕಚೋರಿ

ಕಚೋರಿ ಎಂದ ಕೂಡಲೇ ಕೆಲವರಿಗೆ ಬಾಯಲ್ಲಿ ನೀರು ಬರುತ್ತದೆ. ಕಚೋರಿಯನ್ನು ತಿನ್ನೋಣ ಎನಿಸುತ್ತದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಉದ್ದಿನ ಬೇಳೆ ಕಚೋರಿಯ ಕುರಿತಾದ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು: 250 ಗ್ರಾಂ ಮೈದಾ, ಅರ್ಧ ಚಮಚ ಉಪ್ಪು, ಅರ್ಧ ಸೌಟು ತುಪ್ಪ, ಕರಿಯಲು ಬೇಕಾಗುವಷ್ಟು ಎಣ್ಣೆ.

ಹೂರಣಕ್ಕೆ ಬೇಕಾಗುವ ಪದಾರ್ಥಗಳು: ಅರ್ಧ ಕಪ್ ಉದ್ದಿನ ಬೇಳೆ, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಧನಿಯಾ ಹಾಗೂ ಒಣ ಶುಂಠಿ ತಲಾ ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂ ಮಸಾಲಾ, ಇಂಗು, ಕೊಬ್ಬರಿ ತುರಿ,

ತಯಾರಿಸುವ ವಿಧಾನ: ಜರಡಿಯಾಡಿಸಿದ ಮೈದಾಗೆ ಉಪ್ಪು, ನೀರು ಬೆರೆಸಿ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲೆಸಿರಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಳ್ಳಿರಿ. ಇದಕ್ಕೆ ಜಿಡ್ಡನ್ನು ಸವರಿ ಒದ್ದೆ ಬಟ್ಟೆಯಲ್ಲಿ ಸುತ್ತಿ, ನೆನೆಯಲು ಬಿಡಿ, ಉದ್ದಿನ ಬೇಳೆಯನ್ನು 1 ರಿಂದ 2 ಗಂಟೆ ಕಾಲ ನೆನೆಹಾಕಿ, ಬಳಿಕ ತರಿತರಿಯಾಗಿ ರುಬ್ಬಿಕೊಳ್ಳಿರಿ.

ಇದಕ್ಕೆ ಉಪ್ಪು ಖಾರ ಮಸಾಲೆ, ಕೊಬ್ಬರಿ ತುರಿ ಸೇರಿಸಿರಿ. ಹೂರಣ ಸಿದ್ಧವಾದ ನಂತರ ಮೈದಾ ಕಣಕವನ್ನು ಮತ್ತೊಮ್ಮೆ ತುಪ್ಪದಲ್ಲಿ ನಾದಿಕೊಂಡು, ಸಣ್ಣ ಸಣ್ಣ ಉಂಡೆಗಳಾಗಿ ಮಾಡಿರಿ. ಪೂರಿ ತರಹ ಲಟ್ಟಿಸಿರಿ. ಅದರ ಮಧ್ಯೆ 2-3 ಚಮಚ ಹೂರಣ ಇರಿಸಿ, ಮಡಿಚಿರಿ. ಮೇಲ್ಭಾಗದಲ್ಲಿ ರಂಧ್ರ ಮಾಡಿ ಕಾದ ಎಣ್ಣೆಯಲ್ಲಿ ಗರಿಗರಿಯಾಗುವಂತೆ ಕರಿಯಿರಿ. ನಿಮಗೆ ರುಚಿಯಾದ ಉದ್ದಿನ ಬೇಳೆಯ ಕಚೋರಿ ಸಿದ್ಧವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...