alex Certify ವಿಶಿಷ್ಟ ರುಚಿಯ ಗೆಣಸಿನ ದೋಸೆ ತಯಾರಿಸುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶಿಷ್ಟ ರುಚಿಯ ಗೆಣಸಿನ ದೋಸೆ ತಯಾರಿಸುವ ವಿಧಾನ

ದೋಸೆಗಳಲ್ಲಿ ಹಲವಾರು ವಿಧ. ಸಾಮಾನ್ಯವಾಗಿ ಮಸಾಲೆ, ಸೆಟ್, ಪೇಪರ್ ದೋಸೆ ಮೊದಲಾದ ಒಂದಿಷ್ಟು ದೋಸೆಗಳ ರುಚಿಯನ್ನು ಮಾತ್ರ ನೋಡಿರುತ್ತೀರಿ. ವಿಶೇಷವಾಗಿ ಗೆಣಸಿನ ದೋಸೆ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು :

ದೋಸೆಹಿಟ್ಟು – 1 ಲೀಟರ್, ಬೇಯಿಸಿದ ಗೆಣಸು (ಕಿವುಚಿದ್ದು) – 500 ಗ್ರಾಂ, ಉಪ್ಪು – 3 ಚಮಚ, ಮಸಾಲೆ ಪುಡಿ – 25 ಗ್ರಾಂ, ಖಾರದಪುಡಿ – 3 ಚಮಚ, ಎಣ್ಣೆ – 300 ಗ್ರಾಂ.

ತಯಾರಿಸುವ ವಿಧಾನ :

ಮೇಲೆ ತಿಳಿಸಿದ ಪದಾರ್ಥಗಳನ್ನು ಒಂದು ಸ್ಟೀಲ್ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಲೆಸಿರಿ. ಸ್ವಲ್ಪ ಅರಿಶಿಣ, ಅಡುಗೆ ಸೋಡಾವನ್ನು ಹಾಕಿ ಚೆನ್ನಾಗಿ ಕಲೆಸಿರಿ. ಕಾವಲಿಯನ್ನು ಒಲೆಯ ಮೇಲಿಟ್ಟು ಕಾಯಿಸಿರಿ. ಸೌಟಿನಿಂದ ಹಿಟ್ಟು ತೆಗೆದು ತೆಳುವಾಗಿ ಅಗಲವಾಗಿ ದೋಸೆಯನ್ನು ಹಾಕಿರಿ.

ಚಮಚದಿಂದ 2 – 3 ಸಲ ಎಣ್ಣೆಯನ್ನು ಹಾಕಿ ದೋಸೆ ಎರಡೂ ಬದಿಯಲ್ಲಿ ಬೆಂದು ಗರಿಗರಿಯಾದ ಬಳಿಕ ಕಾವಲಿಯಿಂದ ತೆಗೆದು ತಟ್ಟೆಗೆ ಹಾಕಿರಿ. ಕೊಬ್ಬರಿ ಚಟ್ನಿ, ಪಲ್ಯ, ಸಾಗುವಿನೊಂದಿಗೆ ಸೇವಿಸಿರಿ. ದೋಸೆ ಹಿಟ್ಟನ್ನು 1 ದಿನಕ್ಕಿಂತ ಹೆಚ್ಚು ಸಮಯ ಇಡಬಾರದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...