alex Certify ಮಕ್ಕಳಿಗಾಗಿ ಬೇಸಿಗೆಯಲ್ಲಿ ಮಾಡಿ ರುಚಿ ರುಚಿ ಕುಲ್ಫಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗಾಗಿ ಬೇಸಿಗೆಯಲ್ಲಿ ಮಾಡಿ ರುಚಿ ರುಚಿ ಕುಲ್ಫಿ

ಬೇಸಿಗೆಯಲ್ಲಿ ಎಲ್ಲರೂ ತಣ್ಣನೆ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಆದ್ರೆ ಈ ಸಂದರ್ಭದಲ್ಲಿ ಹೊರಗಿನ ಆಹಾರ ಸೇವನೆ ಒಳ್ಳೆಯದಲ್ಲ.

ಮನೆಯಲ್ಲಿಯೇ ಮಕ್ಕಳಿಗೆ ಇಷ್ಟವಾಗುವ ಕುಲ್ಫಿ ತಯಾರಿಸಿ ಮನೆ ಮಂದಿಯಲ್ಲ ಸವಿಯಬಹುದು.

ಗುಲ್ಕನ್ ಕುಲ್ಫಿ ಮಾಡಲು ಬೇಕಾಗುವ ಸಾಮಗ್ರಿ :

ಸಕ್ಕರೆ – 70 ಗ್ರಾಂ

ಗುಲ್ಕನ್ – 30 ಗ್ರಾಂ

ಬಾದಾಮಿ – 200 ಗ್ರಾಂ (ನೆನೆಸಿ,ಸಿಪ್ಪೆ ಸುಲಿದ ಬಾದಾಮಿ)

ಗುಲಾಬಿ ಎಲೆಗಳು – 40 ಗ್ರಾಂ

ಫುಲ್‌ಕ್ರೀಮ್ ಹಾಲು – 1 -1/2 ಲೀಟರ್

ಖೋಯಾ – 80 ಗ್ರಾಂ

ಕೇಸರಿ – 8 ರಿಂದ 10

ನೀರು – 3 ಕಪ್

ಗುಲ್ಕನ್ ಕುಲ್ಫಿ ಮಾಡುವ ವಿಧಾನ :

ಅರ್ಧ ಕಪ್ ಹಾಲಿಗೆ ಬಾದಾಮಿ ಸೇರಿಸಿ ಮಿಕ್ಸಿ ಮಾಡಿ. ಬಾಣಲೆಯಲ್ಲಿ ನೀರು, ಸಕ್ಕರೆ ಮತ್ತು ಗುಲಾಬಿ ಎಲೆಗಳನ್ನು ಸೇರಿಸಿ ಪಾಕ ಮಾಡಿ. ಒಂದು ಪಾತ್ರೆಯಲ್ಲಿ 2 ಚಮಚ ಹಾಲು ಮತ್ತು ಕೇಸರಿಯನ್ನು ನೆನೆಸಿ. ಉಳಿದ ಹಾಲನ್ನು ಪ್ರತ್ಯೇಕ ಬಾಣಲೆಯಲ್ಲಿ ಬಿಸಿ ಮಾಡಿ.

ನಂತ್ರ ಹಾಲಿಗೆ ಸಕ್ಕರೆ ಪಾಕ, ಕೇಸರಿ ಹಾಲು, ಗುಲ್ಕನ್ ಮತ್ತು ಬಾದಾಮಿ ಪೇಸ್ಟ್ ಸೇರಿಸಿ ಹಾಲನ್ನು ದಪ್ಪಮಾಡಿ. ಮಿಶ್ರಣ ತಣ್ಣಗಾದ ನಂತರ ಕುಲ್ಫಿ ಅಚ್ಚಿಗೆ ಹಾಕಿ. 4-5 ಗಂಟೆಗಳ ಕಾಲ ಫ್ರಿಜ್ ನಲ್ಲಿಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...