alex Certify ಬಾಯಲ್ಲಿ ನೀರೂರಿಸುವ ‘ಶೀರ್ ಕುರ್ಮಾ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಲ್ಲಿ ನೀರೂರಿಸುವ ‘ಶೀರ್ ಕುರ್ಮಾ’

ಈದ್ ಹಬ್ಬದಲ್ಲಿ ಇದನ್ನು ಮಾಡಲಾಗುತ್ತದೆ. ಸಕ್ಕರೆ, ಶ್ಯಾವಿಗೆ, ಖರ್ಜೂರ ಸೇರಿಸಿ ಮಾಡುವ ಒಂದು ಸಿಹಿಯಾದ ಖಾದ್ಯ. ಮಾಡುವುದಕ್ಕೂ ಸುಲಭ. ತಿನ್ನುವುದಕ್ಕೂ ತುಂಬಾ ಚೆನ್ನಾಗಿರುತ್ತದೆ.

ಒಂದು ಬಾಣಲೆಗೆ 1 ½ ಟೇಬಲ್ ಸ್ಪೂನ್ ತುಪ್ಪ ಹಾಕಿ ಅದು ಬಿಸಿಯಾಗುತ್ತಲೆ ಅದಕ್ಕೆ ಸ್ವಲ್ಪ ಪಿಸ್ತಾ, ಬಾದಾಮಿ, ವಾಲ್ ನಟ್ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 7 ಖರ್ಜೂರವನ್ನು ಚಿಕ್ಕಚಿಕ್ಕದ್ದಾಗಿ ಕತ್ತರಿಸಿಕೊಂಡು ಹಾಕಿ ಫ್ರೈ ಮಾಡಿ.

ನಂತರ ಅದಕ್ಕೆ 1 ಲೀಟರ್ ಹಾಲು ಹಾಕಿ. ಚಿಟಿಕೆ, ಕೇಸರಿ, 1 ಟೀ ಸ್ಪೂನ್ ಏಲಕ್ಕಿ ಪುಡಿ, ½ ಕಪ್ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಹಾಲು ಅರ್ಧ ಲೀಟರ್ ಆಗುವವರೆಗೆ ಕುದಿಸಿಕೊಂಡು ಗ್ಯಾಸ್ ಆಫ್ ಮಾಡಿ.

ನಂತರ ಒಂದು ಪ್ಯಾನ್ ಗೆ 1 ಟೇಬಲ್ ಸ್ಪೂನ್ ತುಪ್ಪ ಹಾಕಿ ಅದಕ್ಕೆ 1 ಮುಷ್ಟಿಯಷ್ಟು ಶ್ಯಾವಿಗೆ ಹಾಕಿ ಹುರಿದುಕೊಳ್ಳಿ. ನಂತರ ಇದಕ್ಕೆ ಕುದಿಸಿಟ್ಟುಕೊಂಡ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 8 ನಿಮಿಷಗಳ ಕಾಲ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...