alex Certify ʼಶ್ರಾವಣʼ ಆರಂಭಕ್ಕೂ ಮುನ್ನ ಸುಲಭವಾಗಿ ಮಾಡಿ ಸವಿಯಿರಿ ಚಿಕನ್ ಮಸಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಶ್ರಾವಣʼ ಆರಂಭಕ್ಕೂ ಮುನ್ನ ಸುಲಭವಾಗಿ ಮಾಡಿ ಸವಿಯಿರಿ ಚಿಕನ್ ಮಸಾಲ

ಚಿಕನ್ ಮಸಾಲ ಎಂದರೆ ಮಾಂಸಹಾರ ಪ್ರಿಯರಿಗೆ ತುಂಬಾ ಇಷ್ಟ. ಇಲ್ಲಿ ಸುಲಭವಾಗಿ ಮಾಡುವ ಚಿಕನ್ ಮಸಾಲ ವಿಧಾನವಿದೆ. ಅನ್ನ, ದೋಸೆ, ಚಪಾತಿ ಮಾಡಿದಾಗ ಇದನ್ನು ಮಾಡಿಕೊಂಡು ಸವಿಯಬಹುದು.

ಮೊದಲಿಗೆ ½ ಕೆಜಿ ಚಿಕನ್ ಅನ್ನು ಚೆನ್ನಾಗಿ ತೊಳೆದು ಸ್ವಲ್ಪ ಉಪ್ಪು, ಅರಿಸಿನ ಹಾಕಿ ಇಡಿ. ನಂತರ 2 ಹದ ಗಾತ್ರದ ಈರುಳ್ಳಿಯನ್ನು ಕತ್ತರಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 3 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಈರುಳ್ಳಿ ಹಾಕಿ ಫ್ರೈ ಮಾಡಿ.

ಈರುಳ್ಳಿ ಕೆಂಪಾಗುತ್ತಲೆ 1 ಟೇಬಲ್ ಸ್ಪೂನ್ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ನಂತರ ಚಿಕನ್ ಹಾಕಿ ಸ್ವಲ್ಪ ಉಪ್ಪು ಹಾಕಿ ಮುಚ್ಚಿಡಿ. ಚಿಕನ್ ನೀರು ಬಿಟ್ಟುಕೊಳ್ಳುತ್ತದೆ. ನಂತರ 2 ಹದ ಗಾತ್ರದ ಟೊಮೆಟೊ ಕತ್ತರಿಸಿ ಹಾಕಿ ಚೆನ್ನಾಗಿ ಬೇಯಲು ಬಿಡಿ.

ಇದಕ್ಕೆ 1 ಚಮಚ ಧನಿಯಾ ಪುಡಿ, 1 ಟೀ ಸ್ಪೂನ್ ಗರಂ ಮಸಾಲ, 4 ಟೇಬಲ್ ಸ್ಪೂನ್ ಚಿಕನ್ ಮಸಾಲ, 1 ಟೀ ಸ್ಪೂನ್ ಕಾಳುಮೆಣಸಿನಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಲು ಬಿಡಿ. ನಂತರ ¼ ಕಪ್ ನಷ್ಟು ತೆಂಗಿನಕಾಯಿ ತುರಿಯನ್ನು ಮಿಕ್ಸಿಯಲ್ಲಿ ರುಬ್ಬಿ ಇದಕ್ಕೆ ಹಾಕಿ 8 ನಿಮಿಷಗಳ ಕಾಲ ಬೇಯಲು ಬಿಡಿ. ಕೊತ್ತಂಬರಿಸೊಪ್ಪು ಸೇರಿಸಿ ಗ್ಯಾಸ್ ಆಫ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...