alex Certify ಹಿಮೋಗ್ಲೊಬಿನ್ ಕೊರತೆಯಿಂದ ಬಳಲುವವರು ಸೇವಿಸಿ ಈ ‘ಆಹಾರ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮೋಗ್ಲೊಬಿನ್ ಕೊರತೆಯಿಂದ ಬಳಲುವವರು ಸೇವಿಸಿ ಈ ‘ಆಹಾರ’

ನೋಡೋಕೆ ಸಣ್ಣದಾಗಿ ಕಾಣಬೇಕು ಅಂತಾ ಅನೇಕ ಯುವತಿಯರು ಡಯಟ್​ ಹೆಸರಲ್ಲಿ ಸಾಕಷ್ಟು ಆಹಾರ ಪದಾರ್ಥಗಳನ್ನ ತ್ಯಜಿಸುತ್ತಾರೆ. ಆದರೆ ಅವೈಜ್ಞಾನಿಕ ಡಯಟ್ ಪ್ಲಾನ್​ನಿಂದಾಗಿ ಬಹುತೇಕ ಮಂದಿ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗುತ್ತೆ.

ರಕ್ತದಲ್ಲಿ ಹಿಮೋಗ್ಲೋಬಿನ್​ ಅಂಶ ಕಡಿಮೆಯಾಗೋದ್ರಿಂದ ದೇಹದ ಪ್ರತಿಯೊಂದು ಕೋಶಕ್ಕೂ ಆಮ್ಲಜನಕ ತಲುಪೋದಿಲ್ಲ. ಇದರಿಂದ ಸುಸ್ತು, ಉಗುರಿನ ಬಣ್ಣ ಬದಲಾಗೋದು, ಮುಟ್ಟಿನ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತದೆ.

ಆದರೆ ಈ ದೇಹದಲ್ಲಿನ ಹಿಮೋಗ್ಲೋಬಿನ್​ ಅಂಶವನ್ನ ಸರಿದೂಗಿಸಬೇಕು ಅಂದರೆ ಮನೆಯಲ್ಲೇ ಇದಕ್ಕೆ ಉತ್ತರವಿದೆ. ನಿಮ್ಮ ಅಡುಗೆ ಮನೆಯಲ್ಲೇ ಇರುವ ಪದಾರ್ಥಗಳನ್ನ ಬಳಕೆ ಮಾಡಿ ನೀವು ಈ ಸಮಸ್ಯೆಯಿಂದ ಪಾರಾಗಬಹುದಾಗಿದೆ.

ಹಿಮೋಗ್ಲೋಬಿನ್​ ಸಮಸ್ಯೆಯಿಂದ ಪಾರಾಗೋಕೆ ಕ್ಯಾರಟ್​, ಬೀಟ್​ರೂಟ್​ನಿಂದ ಮಾಡಿದ ಜ್ಯೂಸ್​ಗಳು, ದಾಳಿಂಬೆ ಜ್ಯೂಸ್​​ಗಳನ್ನ ಹೆಚ್ಚಾಗಿ ಸೇವನೆ ಮಾಡಿ. ಟೀ ಹಾಗೂ ಕಾಫಿ ಸೇವನೆಯನ್ನ ಆದಷ್ಟು ಕಡಿಮೆ ಮಾಡಿ.

ಅನೀಮಿಯಾದಿಂದ ಬಳಲುತ್ತಿರುವವರಿಗೆ ಡ್ರೈ ಫ್ರೂಟ್ಸ್ ಸೇವನೆ ತುಂಬಾನೇ ಒಳ್ಳೆಯದು. ಡ್ರೈ ಫ್ರೂಟ್ಸ್​ ದೇಹಕ್ಕೆ ಕಬ್ಬಿಣಾಂಶವನ್ನ ನೀಡುತ್ತೆ. ಅದರಲ್ಲೂ ವಾಲ್​ನಟ್​, ಗೋಡಂಬಿ ದೇಹಕ್ಕೆ ಕಬ್ಬಿಣಾಂಶವನ್ನ ಒದಗಿಸುವಲ್ಲಿ ಹೆಚ್ಚು ಸಹಕಾರಿ.

ಮನೆಯಲ್ಲಿರುವ ಈ ಆಹಾರ ಪದಾರ್ಥಗಳನ್ನ ಸೇವಿಸುವ ಮೂಲಕವೇ ನೀವು ಹಿಮೋಗ್ಲೋಬಿನ್​ ಕೊರತೆಯನ್ನ ಸರಿ ಮಾಡಿಕೊಳ್ಳಬಹುದು. ಆದರೆ ಅತಿಯಾದ ಹಿಮೋಗ್ಲೊಬಿನ್ ಕೊರತೆಯಿಂದ ನೀವು ಬಳಲುತ್ತಿದ್ದರೆ ಆಸ್ಪತ್ರೆಗೆ ಭೇಟಿ ನೀಡೋದು ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...