alex Certify ಕಾಲು ಸೆಳೆತ ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲು ಸೆಳೆತ ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ

ದೇಹದಲ್ಲಿ ರಕ್ತಸಂಚಾರ ಸರಾಗವಾಗಿ ಆಗದಿದ್ದಾಗ, ಕ್ಯಾಲ್ಸಿಯಂ ಕೊರತೆಯಾದಾಗ ಕಾಲುಗಳಲ್ಲಿ ನೋವು, ಸೆಳೆತ, ಮರಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಸರಿಯಾಗಿ ನಡೆಯಲು, ಕುಳಿತುಕೊಳ್ಳಲು ಆಗುವುದಿಲ್ಲ. ಈ ಕಾಲು ಸೆಳೆತವನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.

  • ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿಕೊಂಡು ಕಾಲಿಗೆ 15 ನಿಮಿಷ ಮಸಾಜ್ ಮಾಡಿ ಇದರಿಂದ ರಕ್ತ ಸಂಚಾರ ಸರಾಗವಾಗಿ ಕಾಲು ಸೆಳೆತ ಕಡಿಮೆಯಾಗುತ್ತದೆ.
  • ಪ್ರತಿದಿನವೂ ಓಟ, ಈಜು, ಜಾಗಿಂಗ್, ಸೈಕ್ಲಿಂಗ್ ಮುಂತಾದ ವ್ಯಾಯಾಮ ಮಾಡುವುದರಿಂದ ಕಾಲಿನ ಸೆಳೆತ ಕಡಿಮೆಯಾಗುತ್ತದೆ.
  • ವಿಟಮಿನ್ ಡಿ ಕೊರತೆಯಿಂದ ಸ್ನಾಯು ಸೆಳೆತ ಉಂಟಾಗುತ್ತದೆ. ಹಾಗಾಗಿ ಕಾಲು ಸೆಳೆತವಿರುವವರು ವಿಟಮಿನ್ ಡಿ ಯುಕ್ತ ಆಹಾರ ಸೇವಿಸಿ.
  • ದೇಹಕ್ಕೆ ನೀರು ಸರಿಯಾದ ಪ್ರಮಾಣದಲ್ಲಿ ಸೇರಿದಾಗ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ಹಾಗಾಗಿ ಪ್ರತಿದಿನ ಸರಿಯಾಗಿ ನೀರನ್ನು ಕುಡಿಯಿರಿ.
  • ಆಪಲ್ ಸೈಡರ್ ವಿನೆಗರ್ ನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಮುಂತಾದ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. 1 ಲೋಟ ನೀರಿಗೆ 2 ಚಮಚ ಆಪಲ್ ಸೈಡರ್ ವಿನೆಗರ್ ಮತ್ತು ಜೇನುತುಪ್ಪ, ನಿಂಬೆರಸ ಸೇರಿಸಿ ಪ್ರತಿದಿನ 2 ಬಾರಿ ಸೇವಿಸಿದರೆ ಕಾಲು ಸೆಳೆತ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...