alex Certify ಕೊರೊನಾ ವೈರಸ್ ನಿಂದ ಉಸಿರಾಟದ ಸಮಸ್ಯೆ ಕಾಡಲು ಕಾರಣವೇನು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವೈರಸ್ ನಿಂದ ಉಸಿರಾಟದ ಸಮಸ್ಯೆ ಕಾಡಲು ಕಾರಣವೇನು…..?

ಕೊರೊನಾ ವೈರಸ್ ನಿಯಂತ್ರಣಕ್ಕೆ ಬರ್ತಿಲ್ಲ. ಪ್ರತಿ ದಿನವೂ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ವೈರಸ್ ದೇಹ ಪ್ರವೇಶಿಸಿದ ನಂತ್ರ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೊರೊನಾ ವೈರಸ್ ರೋಗ ಲಕ್ಷಣಗಳಲ್ಲಿ ಉಸಿರಾಟದ ತೊಂದರೆ ಅತ್ಯಂತ ಅಪಾಯಕಾರಿ ಹಾಗೂ ಭಯ ಹುಟ್ಟಿಸುವ ಲಕ್ಷಣವಾಗಿದೆ.

ಉಸಿರಾಡಲು ತೊಂದರೆಯಾಗುವುದು, ಎದೆ ನೋವು ಎಲ್ಲವೂ ಕೊರೊನಾ ಲಕ್ಷಣಗಳಲ್ಲಿ ಒಂದಾಗಿದ್ದು, ಇವು ವೇಗವಾಗಿ ದೇಹದೊಳಗೆ ಹರಡುವ ಸೂಚನೆ ನೀಡುತ್ತವೆ. ಉಸಿರಾಟದ ತೊಂದರೆ ಕೆಲವರಿಗೆ ಸೌಮ್ಯವಾಗಿರುತ್ತದೆ. ಮನೆಯಲ್ಲಿಯೇ ಇದನ್ನು ಗುಣಪಡಿಸಬಹುದು. ಆದ್ರೆ ಮತ್ತೆ ಕೆಲವರು ಗಂಭೀರ ಸಮಸ್ಯೆ ಎದುರಿಸುತ್ತಾರೆ.

ಬೇರೆ ಬೇರೆ ರೋಗಿಗಳಿಗೆ ಈ ಸಮಸ್ಯೆ ಬೇರೆಬೇರೆಯಾಗಿರುತ್ತದೆ. ಉಸಿರು ಬಿಗಿದಂತೆ ಭಾಸವಾಗುತ್ತದೆ. ರೋಗಿಗಳು ಸೆಕೆಂಡಿಗೊಮ್ಮೆ ಶುದ್ಧ ಗಾಳಿಯ ಹುಡುಕಾಟ ನಡೆಸುತ್ತಾರೆ.

ಕೊರೊನಾ ವೈರಸ್ ಶ್ವಾಸಕೋಶದ ಅಂಗಾಂಶ ಮತ್ತು ಒಳಪದರವನ್ನು ಆಕ್ರಮಿಸುತ್ತದೆ. ಇದು ವೇಗವಾಗಿ ಹರಡುತ್ತದೆ ಮತ್ತು ಉಸಿರಾಟಕ್ಕೆ ಅಡ್ಡಿಪಡಿಸುತ್ತದೆ. ಸೋಂಕು, ಪೋಷಕಾಂಶಗಳು, ದ್ರವಗಳು ಮತ್ತು ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯವುಂಟು ಮಾಡಿ ಶ್ವಾಸಕೋಶದ ಕಾರ್ಯಕ್ಕೆ ಅಡ್ಡಿ ಮಾಡುತ್ತದೆ. ಇದು ಹೆಚ್ಚು ತೊಂದರೆಯುಂಟು ಮಾಡುವ ಜೀವಾಣುಗಳ ರಚನೆಗೆ ಕಾರಣವಾಗಬಹುದು. ಆಮ್ಲಜನಕದ ಹರಿವಿನ ಇಳಿಕೆ ರಕ್ತದ ಹರಿವಿನ ಮೇಲೂ ಪರಿಣಾಮ ಬೀರುತ್ತದೆ.

ಜನರು ದೀರ್ಘಕಾಲದ ಉಸಿರಾಟದ ಕಾಯಿಲೆಗಳು ಅಥವಾ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರೆ, ನ್ಯುಮೋನಿಯಾ, ಸಿಒಪಿಡಿಯಂತಹ ಕೆಲವು ಉಸಿರಾಟದ ಸಮಸ್ಯೆಯಿದ್ದರೆ ಈ ಸೋಂಕು ಸಾಕಷ್ಟು ಕಿರಿಕಿರಿಯನ್ನು ಉಂಟುಮಾಡಬಹುದು.

ಈ ವೈರಸ್ 5ರಿಂದ 16 ದಿನಗಳವರೆಗೆ ತೊಂದರೆ ನೀಡುತ್ತದೆ. ಉಸಿರಾಟದ ಸಮಸ್ಯೆ ರೋಗಲಕ್ಷಣಗಳಲ್ಲಿ ಒಂದಾಗಿದ್ದರೂ, ಇತರ ಲಕ್ಷಣಗಳು ಕಾಣಿಸಿಕೊಂಡ ನಾಲ್ಕೈದು ದಿನಗಳ ನಂತ್ರ ಈ ಸಮಸ್ಯೆ ಕಾಡುತ್ತೆ ಎನ್ನಲಾಗಿದೆ. ಎಲ್ಲ ಉಸಿರಾಟದ ಸಮಸ್ಯೆಯೂ ಮಾರಕವಲ್ಲ. ಯಾವ ಹಂತದಲ್ಲಿ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂಬುದನ್ನು ತಿಳಿಯಬೇಕು.

ಉಸಿರಾಡುವಾಗ ತೀವ್ರ ಎದೆ ನೋವು ಕಾಣಿಸಿಕೊಂಡರೆ, ಉಸಿರಾಡಲು ತೊಂದರೆಯಾದ್ರೆ, ಕೆಮ್ಮಿದಾಗ ಕಫ ಬಂದಲ್ಲಿ, ಗೊಂದಲ, ವಿಪರೀತ ಚಳಿ ಈ ಎಲ್ಲ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

ತೀವ್ರ ಉಸಿರಾಟದ ಸಮಸ್ಯೆಯಿರುವವರಿಗೆ ಆಕ್ಸಿಜನ್ ಅಳವಡಿಸಲಾಗುತ್ತದೆ. ಜೊತೆಗೆ ಸರಿಯಾದ ಚಿಕಿತ್ಸೆ ನೀಡಲಾಗುತ್ತದೆ. ಲಕ್ಷಣಗಳು ಸೌಮ್ಯವಾಗಿದ್ದರೆ ನೀವು ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು. ವ್ಯಾಯಾಮದ ಮೂಲಕ ಉಸಿರಾಟದ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಉಸಿರಾಟದ ವ್ಯಾಯಾಮ, ತುಟಿಗಳನ್ನು ಮುಂದೆ ತಂದು ಉಸಿರಾಡುವುದು, ಹೊಟ್ಟೆ ಕೆಳಗೆ ಹಾಕಿ ಮಲಗುವುದು ಇಲ್ಲವೆ ಒಂದು ಮಗ್ಗಲಿನಲ್ಲಿ ಮಲಗುವುದು ಉಸಿರಾಟದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...