alex Certify ಮಹಾಮಾರಿ ಕೊರೋನಾ ಕುರಿತ ಈ ಮಾಹಿತಿ ನೀವು ಓದಲೇಬೇಕು…. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾಮಾರಿ ಕೊರೋನಾ ಕುರಿತ ಈ ಮಾಹಿತಿ ನೀವು ಓದಲೇಬೇಕು….

ಕೊರೋನಾ ವೈರಸ್ ಎನ್ನುವುದು ಇತ್ತೀಚೆಗೆ ಮನುಕುಲವನ್ನು ಕಾಡುತ್ತಿರುವ ಭಯಾನಕ ಕಾಯಿಲೆ. ಚೈನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ರೋಗವು ಪ್ರಪಂಚದಾದ್ಯಂತ ಹರಡುತ್ತಿದೆ. ಇದೀಗ ಭಾರತದಲ್ಲಿಯೂ ಹರಡುತ್ತಿದೆ.

ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಂಕ್ರಾಮಿಕ ಖಾಯಿಲೆಯಾಗಿದೆ. ಸೂಕ್ತ ಆರೈಕೆ ಹಾಗೂ ತಪಾಸಣೆ ನಡೆಸಿದರೆ ಗುಣಮುಖರಾಗಬಹುದು. ಆದರೆ ಕೆಲವು ಆರೋಗ್ಯ ಸಮಸ್ಯೆಗಳು ಬರುವ ಮೊದಲೇ ಕೆಲವು ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕು ಇಲ್ಲವಾದರೆ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುವುದು.

ರೋಗ ಲಕ್ಷಣಗಳು:

ಕೊರೋನ ವೈರಸ್ ತಗುಲಿದಾಗ ಶೀತ ಅಥವಾ ಜ್ವರ ಪ್ರಮುಖ ಲಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗ ಸಮಸ್ಯೆಯು ಎರಡರಿಂದ ನಾಲ್ಕು ದಿನಗಳ ಕಾಲ ಮುಂದುವರಿಯುವುದು. ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಈ ರೋಗದ ಕೆಲವು ಲಕ್ಷಣಗಳು ಅತಿಯಾಗಿ ಮರಣ ಹೊಂದುವ ಸಾಧ್ಯತೆಗಳು ಹೆಚ್ಚು.

ಈ ವೈರಸ್ ತಗುಲಿದಾಗ ವ್ಯಕ್ತಿಯಲ್ಲಿ ಅತಿಯಾದ ಸೀನು, ಸುರಿಯುವ ಮೂಗು, ಆಯಾಸ, ಕೆಮ್ಮು, ಜ್ವರ, ಗಂಟಲು ನೋವು, ತೀವ್ರವಾದ ಅಸ್ತಮದ ಸಮಸ್ಯೆ ಕಾಣಿಸಿಕೊಳ್ಳುವುದು.

ಕೊರೋನಾ ವೈರಸ್ ನಾಯಿಯಿಂದ ಮನುಷ್ಯರಿಗೆ ಹರಡುವುದೇ?  

ಪ್ರಾಣಿಗಳನ್ನು ಮುಟ್ಟುವಾಗ ಆದಷ್ಟು ಗ್ಲೌಸ್ ಧರಿಸಿಯೇ ಮುಟ್ಟಬೇಕು. ಶೀತ ಅಥವಾ ಸೀನು ಬಂದಾಗ ಆದಷ್ಟು ಕರವಸ್ತ್ರ ಅಥವಾ ಟಿಷ್ಯೂ ಪೇಪರ್ ನಿಂದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ. ನಂತರ ಅದನ್ನು ಎಲ್ಲೆಂದರಲ್ಲಿ ಬಿಸಾಡದಿರಿ. ಸೀನಿನಿಂದ ಅಥವಾ ವೈರಸ್‍ಗೆ ಒಳಗಾದ ವ್ಯಕ್ತಿ ಮುಟ್ಟಿರುವ ವಸ್ತುಗಳನ್ನು ಇತರರು ಮುಟ್ಟುವುದರಿಂದಲೂ ರೋಗ ಹರಡುವುದು.

ಸಾಮಾನ್ಯ ಜ್ವರ ಅಥವಾ ಶೀತ ಕಾಣಿಸಿಕೊಂಡಾಗ ಆದಷ್ಟು ಮನೆಯಲ್ಲಿ ಕುಳಿತು ವಿಶ್ರಾಂತಿಯನ್ನು ಪಡೆಯಿರಿ. ಒತ್ತಡದಿಂದ ದೂರವಿರಿ, ಹೆಚ್ಚೆಚ್ಚು ನೀರನ್ನು ಕುಡಿಯಿರಿ, ಗಂಟಲು ಶುಷ್ಕತೆಗೆ ಒಳಗಾಗಲು ಬಿಡದಿರಿ ಹಾಗೂ ಧೂಮಪಾನಗಳಂತಹ ಕೆಟ್ಟ ಚಟಗಳಿಂದ ದೂರ ಉಳಿಯಿರಿ.

ಮುನ್ನೆಚ್ಚರಿಕೆ ಕ್ರಮಗಳು:

ಸೋಪು ಅಥವಾ ನೀರಿನಿಂದ ಕೈ ತೊಳೆಯುವುದನ್ನು ಅಭ್ಯಾಸ ಮಾಡಿ ಅಥವಾ ಆಲ್ಕೊಹಾಲ್ ಆಧಾರಿತ ಹ್ಯಾಂಡ್ ರಬ್‍ಗಳನ್ನು ಬಳಸಿ. ಕೈಗಳು ಸ್ವಚ್ಛವಾಗಿದ್ದರೂ ಸೋಪು ಮತ್ತು ನೀರಿನಿಂದ ಕೈತೊಳೆಯುವುದನ್ನು ಮರೆಯದಿರಿ.

ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಅಥವಾ ಕರವಸ್ತ್ರ ಉಪಯೋಗಿಸಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ ಹಾಗೂ ಉಪಯೋಗಿಸಿದ ಟಿಶ್ಯೂ ಪೇಪರ್ ಅನ್ನು ತಕ್ಷಣವೇ ಮುಚ್ಚಿದ ತೊಟ್ಟಿಯಲ್ಲಿ ಎಸೆಯಿರಿ.

ನಿಮಗೆ ರೋಗ ಲಕ್ಷಣಗಳು ಕಂಡುಬಂದಲ್ಲಿ( ಜ್ವರ, ಉಸಿರಾಟದ ತೊಂದರೆ, ನಗಡಿ ಅಥವಾ ಕೆಮ್ಮು) ವೈದ್ಯರನ್ನು ಭೇಟಿಮಾಡಿ. ವೈದ್ಯರನ್ನು ಭೇಟಿ ಮಾಡುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಲು ಮಾಸ್ಕ್ ಧರಿಸಿ ಅಥವಾ ಕರವಸ್ತ್ರದಿಂದ ಮುಚ್ಚಿಕೊಳ್ಳಿ.

ಈ ರೋಗಲಕ್ಷಣಗಳು ಅಥವಾ ಚಿಹ್ನೆಗಳಿದ್ದರೆ 24/7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ. ಹೆಚ್ಚು ಜನಸಂದಣಿ ಇರುವ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ.

ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದರೆ ಎಲ್ಲರೊಂದಿಗೂ ನಿಕಟ ಸಂಪರ್ಕ ಹೊಂದದಿರಿ. ಕಣ್ಣುಗಳು, ಮೂಗು ಮತ್ತು ಬಾಯಿಯನ್ನು ಆಗಾಗ ಸ್ಪರ್ಶಿಸಬೇಡಿ. ಸಾರ್ವಜನಿಕವಾಗಿ ಉಗುಳಬೇಡಿ.

ಹೆಚ್ಚಿನ ಮಾಹಿತಿಗಾಗಿ 24X7 ಉಚಿತ ಆರೊಗ್ಯ ಸಹಾಯವಾಣಿ 104 ಮತ್ತು 080-22208541 ಅಥವಾ ಕೇಂದ್ರ ಆರೋಗ್ಯ ಸಚಿವಾಲಯದ 24X7 ಉಚಿತ ಆರೋಗ್ಯ ಸಹಾಯವಾಣಿ 91-11-23978046 ಸಂಪರ್ಕಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...