alex Certify ʼಕೊರೊನಾʼ ಸಂಕಷ್ಟದ ನಡುವೆ ಕಾಡುತ್ತಿದೆಯಾ ಖಿನ್ನತೆ…? ಇದರಿಂದ ಹೊರ ಬರಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸಂಕಷ್ಟದ ನಡುವೆ ಕಾಡುತ್ತಿದೆಯಾ ಖಿನ್ನತೆ…? ಇದರಿಂದ ಹೊರ ಬರಲು ಇಲ್ಲಿದೆ ಟಿಪ್ಸ್

ಸಾಮಾಜಿಕ ಅಂತರ ಕಾಪಾಡೋದರಿಂದ ಕೋವಿಡ್​ 19 ಚೈನ್​ನ್ನು ಬ್ರೇಕ್​ ಮಾಡಬಹುದು ಎಂದು ಈಗಾಗಲೇ ಸಾಕಷ್ಟು ಅಧ್ಯಯನಗಳು ಹೇಳಿವೆ. ಆದರೆ ಸೋಶಿಯಲ್​ ಐಸೋಲೇಷನ್​ ವೇಳೆ ಅನೇಕರ ಮಾನಸಿಕ ಆರೋಗ್ಯ ಹದಗೆಡುತ್ತಿದೆ. ಒತ್ತಡ, ಖಿನ್ನತೆಯಂತಹ ಸಮಸ್ಯೆಗಳು ಐಸೋಲೇಷನ್​ನಲ್ಲಿ ಇರುವವರಲ್ಲಿ ಕಾಣಿಸಿಕೊಳ್ಳುತ್ತಿದೆ.

ಐಸೋಲೇಷನ್​ನಲ್ಲಿ ಇದ್ದ ವೇಳೆ ಒತ್ತಡ ಹಾಗೂ ಆತಂಕ ಕಡಿಮೆ ಮಾಡಲು ಇಲ್ಲಿದೆ ಮಾರ್ಗ :

1. ಒಂಟಿತನ ಹೆಚ್ಚಾದಂತೆಯೇ ಆತಂಕ ಹಾಗೂ ಖಿನ್ನತೆ ಕಾಡಲು ಆರಂಭವಾಗುತ್ತೆ. ಈ ಸಂದರ್ಭದಲ್ಲಿ ಆದಷ್ಟು ಸ್ನೇಹಿತರ ಜೊತೆ ಸಂಪರ್ಕದಲ್ಲಿರಿ. ನಿಮ್ಮ ಆತಂಕ, ಚಿಂತೆಯನ್ನ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಿ.

2. ಪ್ರಾಣಾಯಾಮ, ಧ್ಯಾನ, ದೀರ್ಘ ಉಸಿರಾಟ ಇವೆಲ್ಲವೂ ಆತಂಕ ಹಾಗೂ ಒತ್ತಡವನ್ನ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ.

3. ವ್ಯಾಯಾಮ ಕೂಡ ಆತಂಕ ಹಾಗೂ ಖಿನ್ನತೆ ನಿವಾರಣೆಗೆ ಉತ್ತಮ ಪರಿಹಾರವಾಗಿದೆ. ದಿನಕ್ಕೆ ಕನಿಷ್ಟ 30 ನಿಮಿಷ ಏರೋಬಿಕ್ಸ್ ಮಾಡಿ. ಸಂಗೀತವನ್ನ ಹಾಕಿಕೊಂಡು ವ್ಯಾಯಾಮ ಮಾಡೋದ್ರಿಂದ ನಿಮಗೆ ಇನ್ನಷ್ಟು ನಿರಾಳ ಎನಿಸಲಿದೆ.

4. ಚಿಂತೆ ಮಾಡೋದ್ರಿಂದ ಮಾನಸಿಕ ಆರೋಗ್ಯ ಕೆಡುತ್ತೆ. ಹೀಗಾಗಿ ಚಿಂತೆ ಮಾಡೋದನ್ನು ನಿಲ್ಲಿಸಿ. ಇದರಿಂದ ನಿಮ್ಮ ಆತಂಕ ಕೂಡ ದೂರಾಗಲಿದೆ.

5. ನೀವು ಯಾವ ರೀತಿ ಯೋಚನೆಗಳನ್ನ ಮಾಡುತ್ತಿರೋ ನಿಮ್ಮ ಮಾನಸಿಕ ಆರೋಗ್ಯ ಕೂಡ ಅದೇ ರೀತಿ ಇರುತ್ತೆ. ಸದಾ ಆತಂಕದಲ್ಲೇ ಇರೋದ್ರಿಂದ ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ಅಪನಂಬಿಕೆ ಹುಟ್ಟಬಹುದು. ಹೀಗಾಗಿ ವಿಷಯವನ್ನ ವಿವಿಧ ಆಯಾಮಗಳಲ್ಲಿ ಯೋಚಿಸೋದನ್ನ ಕಲಿತುಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...