alex Certify ಸೈನಸ್ ಸೋಂಕಿನಿಂದ ಮುಕ್ತಿ ಹೊಂದಲು ಈ ಮನೆ ಮದ್ದನ್ನು ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈನಸ್ ಸೋಂಕಿನಿಂದ ಮುಕ್ತಿ ಹೊಂದಲು ಈ ಮನೆ ಮದ್ದನ್ನು ಬಳಸಿ

ಕೆಲವರಿಗೆ ಹವಾಮಾನ ಬದಲಾವಣೆ, ಅಲರ್ಜಿ ಇತ್ಯಾದಿಗಳಿಂದ ಸೈನಸ್ ಸೋಂಕು ಉಂಟಾಗುತ್ತದೆ. ಮೂಗಿನಲ್ಲಿ ಲೋಳೆ ಅಂಶ ಹೆಚ್ಚಾದಾಗ ಈ ಸಮಸ್ಯೆ ಕಾಡುತ್ತದೆ. ಇದರಿಂದ ಮೂಗಿನಲ್ಲಿ ನೋವು, ತಲೆನೋವು, ಬಳಲಿಕೆ ಮುಂತಾದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಗೆ ತಕ್ಷಣ ಪರಿಹಾರ ಪಡೆಯಲು ಈ ಮನೆಮದ್ದನ್ನು ಬಳಸಿ.

*ಆಪಲ್ ಸೈಡರ್ ವಿನೆಗರ್ : ಇದು ಲೋಳೆಯನ್ನು ತೆಳುವಾಗಿಸುತ್ತದೆ, ಮತ್ತು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ಹಾಗಾಗಿ 1 ಗ್ಲಾಸ್ ನೀರಿಗೆ ಆಪಲ್ ಸೈಡರ್ ವಿನೆಗರ್ ಬೆರೆಸಿ ಕುಡಿಯಿರಿ.

*ಶುಂಠಿ : ಇದು ಸೈನಸ್ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಹಾಗಾಗಿ ನೀರಿಗೆ ಶುಂಠಿಯನ್ನು ಸೇರಿಸಿ ಕುದಿಸಿ ಕುಡಿಯಿರಿ.

*ದಿನಕ್ಕೆ 3-4 ಬಾರಿ ಬಿಸಿ ನೀರಿನ ಹಬೆಯನ್ನು ತೆಗೆದುಕೊಳ್ಳಿ. ಇದರಿಂದ ಮೂಗಿನಲ್ಲಿ ಸೇರಿಕೊಂಡ ಲೋಳೆ ಅಂಶ ಕಡಿಮೆಯಾಗಿ ಸೈನಸ್ ಸಮಸ್ಯೆ ನಿವಾರಣೆಯಾಗುತ್ತದೆ.

*ದ್ರಾಕ್ಷಿ ಬೀಜ : ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಸ್ ಗುಣಗಳಿದ್ದು, ಇದು ಸೈನಸ್ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ ನೀರಿಗೆ ದ್ರಾಕ್ಷಿ ಬೀಜವನ್ನು ಹಾಕಿ ಕುದಿಸಿ ಆ ನೀರಿನಿಂದ ಸ್ಟೀಮ್ ತೆಗೆದುಕೊಳ್ಳಿ.

*2 ಚಮಚ ನಿಂಬೆ ರಸಕ್ಕೆ 1 ಚಮಚ ಜೇನುತುಪ್ಪ ಬೆರೆಸಿ ಕುಡಿಯಿರಿ. ಇದರಿಂದ ಸೈನಸ್ ಸಮಸ್ಯೆ ನಿವಾರಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...