alex Certify ಪಾತ್ರೆಗಳಲ್ಲಿರುವ ಸುಟ್ಟ ಕಲೆಗಳನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾತ್ರೆಗಳಲ್ಲಿರುವ ಸುಟ್ಟ ಕಲೆಗಳನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ

ಕೆಲವೊಮ್ಮೆ ಅಡುಗೆ ಮಾಡುವಾಗ ಪಾತ್ರೆ ತಳ ಹಿಡಿಯುತ್ತವೆ, ಸೀದು ಹೋದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಕಷ್ಟದ ಕೆಲಸ. ಇದನ್ನು ಸರಿಯಾಗಿ ಕ್ಲೀನ್ ಮಾಡದಿದ್ದರೆ ಅದರಿಂದ ತಯಾರಿಸಿದ ಅಡುಗೆ ರುಚಿಕರವಾಗಿರುವುದಿಲ್ಲ. ಹಾಗಾಗಿ ಈ ಸುಟ್ಟ  ಪಾತ್ರೆಗಳನ್ನು ಕ್ಲೀನ್ ಮಾಡಲು ಈ ವಿಧಾನಗಳನ್ನು ಅನುಸರಿಸಿ.

*ಸುಟ್ಟ ಪಾತ್ರೆಗಳನ್ನು ಸ್ವಚ್ಚಗೊಳಿಸಲು ಉಪ್ಪನ್ನು ಬಳಸಿ. ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಪಾತ್ರೆಯ ಮೇಲೆ ಸ್ಕ್ರಬ್ ಮಾಡಿ. ಇದರಿಂದ ಕಲೆ ಸುಲಭವಾಗಿ ನಿವಾರಣೆಯಾಗುತ್ತದೆ.

*ಅಡುಗೆ ಸೋಡಾದ ಪೇಸ್ಟ್ ಗಳನ್ನು ಸುಟ್ಟ ಪಾತ್ರೆಗೆ ಹಾಕಿ 15 ನಿಮಿಷ ನೆನೆಸಿಡಿ. ಬಳಿಕ ಅದನ್ನು ಸೋಪ್ ಬಳಸಿ ತೊಳೆಯಿರಿ.

ತ್ವಚೆಯ ಆರೈಕೆ ಹೀಗೆ ಮಾಡಿ

*ಟೊಮೆಟೊ ಸಾಸ್ ನ್ನು ಸುಟ್ಟ ಪಾತ್ರೆಗಳ ಮೇಲೆ ಹಚ್ಚಿ ರಾತ್ರಿಯಿಡಿ ಇಟ್ಟು ಬೆಳಿಗ್ಗೆ ಸ್ಕ್ರಬ್ ಬಳಸಿ ವಾಶ್ ಮಾಡಿ.

*ಸುಟ್ಟ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಸಿಟ್ರಸ್ ಅಂಶ ಸಹಕಾರಿಯಾಗಿದೆ. ಹಾಗಾಗಿ ನಿಂಬೆ ಹಣ್ಣನ್ನು ಬಳಸಿ ಪಾತ್ರೆಗಳ ಮೇಲೆ ಸ್ಕ್ರಬ್ ಮಾಡಿ . ಇದರಿಂದ ಕಲೆಗಳು ಬೇಗನೆ ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...