ಈಗಿನ ಜೀವನಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬಿಪಿ, ಶುಗರ್ ನಂತೆಯೇ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಾಮಾನ್ಯ ಎನ್ನುವಂತಾಗಿದೆ. ಥೈರಾಯ್ಡ್ ಗ್ರಂಥಿ ಹೆಚ್ಚು ಥೈರಾಯ್ಡ್ ಹಾರ್ಮೋನ್ ಉತ್ಪಾದಿಸಲು ಶುರು ಮಾಡುತ್ತದೆ. ಈ ಕಾರಣದಿಂದಾಗಿ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತದೆ.
ಸರಿಯಾದ ಸಮಯದಲ್ಲಿ ಥೈರಾಯ್ಡ್ ಗೆ ಚಿಕಿತ್ಸೆ ಪಡೆಯದೆ ಹೋದಲ್ಲಿ ಮುಂದೆ ಅಪಾಯ ಎದುರಿಸಬೇಕಾಗುತ್ತದೆ. ಔಷಧಿ, ಮಾತ್ರೆ ಜೊತೆ ಯೋಗಾಸನಗಳು ಥೈರಾಯ್ಡ್ ನಿಯಂತ್ರಣದಲ್ಲಿಡಲು ನೆರವಾಗುತ್ತವೆ.
ಅಸ್ತಮಾ, ನ್ಯುಮೋನಿಯಾ ದೂರವಿಡಲು ಈ ಚಹಾ ಸೇವಿಸಿ
ಥೈರಾಯ್ಡ್ ರೋಗಿಗಳಿಗೆ ಬಾಲಾಸನ ಬಹಳ ಒಳ್ಳೆಯದು. ಇದನ್ನು ಮಕ್ಕಳ ಭಂಗಿ ಎಂದು ಕರೆಯುತ್ತಾರೆ. ಉದ್ವೇಗ ಹಾಗೂ ಅಧಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಯೋಗದಿಂದ ರಕ್ತ ದೇಹದ ತುಂಬ ಸರಾಗವಾಗಿ ಹರಡುತ್ತದೆ. ಈ ಆಸನ ಮಾಡುವವರು ಉಸಿರಾಟದ ಕ್ರಮವನ್ನು ಸರಿಯಾಗಿ ತಿಳಿದುಕೊಂಡಿರಬೇಕು.
ದೇಹವನ್ನು ವಿಶ್ರಾಂತಿ ಮಾಡಲು ಮತ್ತು ಮೆದುಳಿಗೆ ಶಾಂತಿ ನೀಡಲು ಶವಾಸನವು ತುಂಬಾ ಪ್ರಯೋಜನಕಾರಿಯಾಗಿದೆ. ಅಧಿಕ ರಕ್ತದೊತ್ತಡ ಮತ್ತು ನಿದ್ರಾಹೀನತೆಯನ್ನು ದೂರ ಮಾಡುತ್ತದೆ. ಇದನ್ನು ಮಾಡುವುದು ತುಂಬಾ ಸುಲಭ.
ಅನುಲೋಮ-ವಿಲೋಮ ಕೂಡ ಥೈರಾಯ್ಡ್ ನಿಯಂತ್ರಣಕ್ಕೆ ಸಹಾಯಕಾರಿ. ಇದನ್ನು ಮಾಡುವುದು ಕೂಡ ಸುಲಭ. ಉಸಿರಾಟದ ವಿಧಾನವನ್ನು ಇದರಲ್ಲಿ ಸರಿಯಾಗಿ ತಿಳಿದುಕೊಂಡಿರಬೇಕು. ಥೈರಾಯ್ಡ್ ನಿಂದ ಬಳಲುವವರು ಯೋಗ ತಜ್ಞರಿಂದ ತರಬೇತಿ ಪಡೆದು ಪ್ರತಿ ದಿನ ಯೋಗ ಮಾಡುವುದು ಒಳ್ಳೆಯದು.