alex Certify ಹಾಲು ಕುಡಿಯಲು ಸರಿಯಾದ ಸಮಯ ಯಾವುದು ಗೊತ್ತಾ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲು ಕುಡಿಯಲು ಸರಿಯಾದ ಸಮಯ ಯಾವುದು ಗೊತ್ತಾ?

ಹಾಲು ಆರೋಗ್ಯಕ್ಕೆ ಉತ್ತಮ ನಿಜ. ಇದರಲ್ಲಿ ಪ್ರೋಟೀನ್, ವಿಟಮಿನ್ ಗಳು ಅಧಿಕ ಪ್ರಮಾಣದಲ್ಲಿದೆ. ಆದರೆ ಹಾಲನ್ನು ಸರಿಯಾದ ಸಮಯದಲ್ಲಿ ಸೇವಿಸಿದರೆ ಮಾತ್ರ ಅದರಿಂದ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಇಲ್ಲವಾದರೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಹಾಗಾದ್ರೆ ಹಾಲನ್ನು ಯಾವಾಗ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಹಾಲನ್ನು ಬೆಳಿಗ್ಗೆ ಕುಡಿದರೆ ಉತ್ತಮ . ಯಾಕೆಂದರೆ ಹಾಲನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು.
ಆದರೆ ಅಸ್ತಮಾ, ಸಂಧಿವಾತ ಸಮಸ್ಯೆ ಇರುವವರು ರಾತ್ರಿಯಲ್ಲಿ ಹಾಲು ಕುಡಿಯುವುದನ್ನು ತಪ್ಪಿಸಬೇಕು. ಯಾಕೆಂದರೆ ಇದರಿಂದ ನಿಮಗೆ ಕಫದ ಸಮಸ್ಯೆ ಕಾಡುತ್ತದೆ, ಕೀಲುಗಳಲ್ಲಿ ಊತ ಕಂಡುಬರುತ್ತದೆ. ಒಂದು ವೇಳೆ ಕುಡಿಯಬೇಕೆಂದರೆ ಹಾಲಿಗೆ ಅರಶಿನ ಬೆರೆಸಿ ರಾತ್ರಿ ಸೇವಿಸಿ.

ಆಲೂಗಡ್ಡೆಯನ್ನು 2 ವಿಧಾನದಲ್ಲಿ ಬಳಸಿ ಚರ್ಮದಲ್ಲಿರುವ ಕಪ್ಪು ಬಣ್ಣವನ್ನು ತೊಲಗಿಸಿ

ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿಯಲ್ಲಿ ಹಾಲು ಕುಡಿಯಿರಿ. ಯಾಕೆಂದರೆ ಇದರಲ್ಲಿರುವ ಅಮೈನೋ ಆಮ್ಲಗಳು ನಿದ್ರೆಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...