alex Certify ಚಳಿಗಾಲದಲ್ಲಿ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮುಖಕ್ಕೆ ಬಳಸಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮುಖಕ್ಕೆ ಬಳಸಬೇಡಿ

ಆರೋಗ್ಯವನ್ನು ಕಾಪಾಡಲು ಹಾಗೂ ಸೌಂದರ್ಯವನ್ನು ವೃದ್ದಿಸಿಕೊಳ್ಳಲು ಕೆಲವರು ರಾಸಾಯನಿಕಗಳ ಬದಲು ಅಡುಗೆ ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತಾರೆ. ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಆದರೆ ಚಳಿಗಾಲದಲ್ಲಿ ಮಾತ್ರ ಈ ಪದಾರ್ಥಗಳನ್ನು ಮಾತ್ರ ಮುಖಕ್ಕೆ ಬಳಸಬೇಡಿ.

*ಅಕ್ಕಿಹಿಟ್ಟು : ಇದು ಚರ್ಮವನ್ನು ಬಿಗಿಗೊಳಿಸುತ್ತದೆ. ಆದರೆ ಚಳಿಗಾಲದಲ್ಲಿ ಬಳಸಿದರೆ ಇದರಿಂದ ಚರ್ಮ ಸುಕ್ಕುಗಟ್ಟಬಹುದು.

*ಕಡಲೆ ಹಿಟ್ಟು : ಇದು ಚರ್ಮದಲ್ಲಿನ ಎಣ್ಣೆಯಂಶವನ್ನು ಕ್ಲೀನ್ ಮಾಡುತ್ತದೆ. ಹಾಗಾಗಿ ಇದನ್ನು ಚಳಿಗಾಲದಲ್ಲಿ ಬಳಸಿದರೆ ಚರ್ಮ ಮತ್ತಷ್ಟು ಡ್ರೈ ಆಗುತ್ತದೆ.

ತ್ವಚೆಯ ಸೌಂದರ್ಯದ ಗುಟ್ಟು ಇಲ್ಲಿದೆ ಕೇಳಿ

*ಸೌತೆಕಾಯಿ : ಇದು ಕೂಡ ಚರ್ಮದಲ್ಲಿರುವ ಎಣ್ಣೆಯಂಶವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದನ್ನು ಚಳಿಗಾಲದಲ್ಲಿ ಬಳಸಿದರೆ ಚರ್ಮಕ್ಕೆ ಹಾನಿಯಾಗಬಹುದು.

*ನಿಂಬೆ : ಇದರಲ್ಲಿರುವ ಆಮ್ಲೀಯತೆ ನಿಮ್ಮ ಚರ್ಮವನ್ನು ಒಣಗಿಸುತ್ತದೆ. ಇದರಿಂದ ಚಳಿಗಾಲದಲ್ಲಿ ಚರ್ಮದ ಸಮಸ್ಯೆ ಕಾಡಬಹುದು.

*ಆಲೂಗಡ್ಡೆ : ಇದು ಚರ್ಮವನ್ನು ಒಣಗಿಸುವ ಗುಣಗಳನ್ನು ಹೊಂದಿದೆ. ಇದನ್ನು ಚಳಿಗಾಲದಲ್ಲಿ ಬಳಸಿದರೆ ಚರ್ಮದ ತುರಿಕೆ, ಉರಿ ಸಮಸ್ಯೆ ಕಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...