alex Certify ಗಾಯವಾದ ಸ್ಥಳದಲ್ಲಿ ಐಬ್ರೋ ಕೂದಲು ಮತ್ತೆ ಬೆಳೆಯಲು ಇದನ್ನು ಹಚ್ಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಯವಾದ ಸ್ಥಳದಲ್ಲಿ ಐಬ್ರೋ ಕೂದಲು ಮತ್ತೆ ಬೆಳೆಯಲು ಇದನ್ನು ಹಚ್ಚಿ

ಐಬ್ರೋಗಳು ದಪ್ಪವಾಗಿದ್ದರೆ ಮುಖದ ಅಂದ ಹೆಚ್ಚಾಗುತ್ತದೆ. ಆದರೆ ಕೆಲವರಿಗೆ ಗಾಯವಾಗಿ ಇಲ್ಲವೇ ಥ್ರೆಡ್ಡಿಂಗ್ ನಿಂದಾಗಿ ಕಟ್ ಆಗಿ ಆ ಸ್ಥಳದಲ್ಲಿ ಕೂದಲು ಬೆಳೆಯುವುದಿಲ್ಲ. ಹಾಗಾಗಿ ಅಂತಹ ಸ್ಥಳದಲ್ಲಿ ಕೂದಲು ಮತ್ತೆ ಬೆಳೆಯಲು ಈ ಮನೆಮದ್ದನ್ನು ಹಚ್ಚಿ.

*ಅಲೋವೆರಾ ಜೆಲ್ : ಇದು ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ. ಹಾಗಾಗಿ ಅಲೋವೆರಾ ಎಲೆಗಳಿಂದ ಜೆಲ್ ತೆಗೆದು ಅದನ್ನು ಐಬ್ರೋಸ್ ಮೇಲೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿ.

ʼಮೊಡವೆʼ ವಾಸಿಯಾಗಲು ಈ ಟಿಪ್ಸ್ ಫಾಲೋ ಮಾಡಿ

*ಈರುಳ್ಳಿ ರಸ : ಇದು ಕೂಡ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿರುವುದರಿಂದ ಈರುಳ್ಳಿ ತುರಿದು ರಸ ತೆಗೆದು ಹುಬ್ಬುಗಳ ಮೇಲೆ ಹಚ್ಚಿ 1 ಗಂಟೆ ಬಿಟ್ಟು ಮುಖವನ್ನು ಸ್ವಚ್ಚಗೊಳಿಸಿ.

*ಟೀ ಟ್ರೀ ಆಯಿಲ್ : ಇದು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಇದು ಚರ್ಮದ ಮೇಲಿನ ಸತ್ತ ಪದರವನ್ನು ತೆಗೆದು ಹಾಕಿ ಅಲ್ಲಿ ಹೊಸ ಕೂದಲು ಬೆಳೆಯುವಂತೆ ಮಾಡುತ್ತದೆ. ಹಾಗಾಗಿ 5 ಹನಿ ಟೀ ಟ್ರೀ ಆಯಿಲ್ ಗೆ 1 ಚಮಚ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಐಬ್ರೋಸ್ ಮೇಲೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...