alex Certify ಉಗುರಿನ ಮೇಲೆ ಕಾಣಿಸಿಕೊಳ್ಳುವ ಬಿಳಿ ಕಲೆಗೆ ಹೇಳಿ ʼಗುಡ್ ಬೈʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಗುರಿನ ಮೇಲೆ ಕಾಣಿಸಿಕೊಳ್ಳುವ ಬಿಳಿ ಕಲೆಗೆ ಹೇಳಿ ʼಗುಡ್ ಬೈʼ

ಉಗುರುಗಳ ಮೇಲೆ ಬಿಳಿ ಕಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ಕೈ ಕಾಲುಗಳ ಉಗುರುಗಳ ಮೇಲೆ ಕಾಣಿಸಿಕೊಳ್ಳುತ್ತದೆ.  ಈ ಕಲೆಗಳು ಸಣ್ಣದಾಗಿರಬಹುದು ಅಥವಾ ದೊಡ್ಡದಾಗಿರಬಹುದು. ಉಗುರುಗಳ ಮೇಲೆ ಬಿಳಿ ಕಲೆಗಳಿಗೆ ಹಲವು ಕಾರಣಗಳಿವೆ. ಶಿಲೀಂಧ್ರಗಳ ಸೋಂಕು, ಅಲರ್ಜಿ ಅಥವಾ ಕ್ಯಾಲ್ಸಿಯಂ ಕೊರತೆ ಇದಕ್ಕೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿರುವ ಈ ಕಲೆಗೆ ಮನೆಯಲ್ಲೇ ಮದ್ದಿದೆ.

ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯಲ್ಲಿ ಉರಿಯೂತ ಹಾಗೂ ಶಿಲೀಂಧ್ರ ವಿರೋಧಿ ಗುಣವಿದೆ. ಇದು ಶಿಲೀಂಧ್ರಗಳ ಸೋಂಕನ್ನು ಗುಣಪಡಿಸುವಲ್ಲಿ ಬಹಳ ಪ್ರಯೋಜನಕಾರಿ. ಶುದ್ಧ ತೆಂಗಿನ ಎಣ್ಣೆಯ ಕೆಲವು ಹನಿ ತೆಗೆದುಕೊಂಡು ಉಗುರಿನ ಬಿಳಿ ಕಲೆ ಮೇಲೆ ಮಸಾಜ್ ಮಾಡಬೇಕು. ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಬೇಕು. ರಾತ್ರಿ ಪೂರ್ತಿ ಹಾಗೆ ಬಿಟ್ಟು ಬೆಳಿಗ್ಗೆ ಉಗುರುಗಳನ್ನು ತೊಳೆಯಿರಿ.

ನಿಂಬೆ – ಆಲಿವ್ ಎಣ್ಣೆ: ನಿಂಬೆ ರಸ ಹಾಗೂ ಆಲಿವ್ ಆಯಿಲ್ ಕೂಡ ಒಳ್ಳೆಯದು. 2 ಚಮಚ ನಿಂಬೆ ರಸ ಮತ್ತು ಕೆಲ ಹನಿ ಆಲಿವ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತ್ರ  ಉಗುರುಗಳಿಗೆ ಹಚ್ಚಿ ಮತ್ತು 25-30 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಇದನ್ನು ಕೆಲ ದಿನ ಮಾಡಿದ್ರೆ ಪರಿಣಾಮ ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...