alex Certify ವರ್ಕ್ ಫ್ರಂ ಹೋಮ್ ಮಾಡುವವರಿಗೊಂದಿಷ್ಟು ಕಿವಿಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಕ್ ಫ್ರಂ ಹೋಮ್ ಮಾಡುವವರಿಗೊಂದಿಷ್ಟು ಕಿವಿಮಾತು

ಕೊರೊನಾ ಕೆಲಸದ ವಿಧಾನವನ್ನು ಬದಲಿಸಿದೆ. ಅನೇಕ ಕಂಪನಿಗಳು ಕಳೆದ ಒಂದು ವರ್ಷದಿಂದ ವರ್ಕ್ ಫ್ರಂ ಹೋಮ್ ಗೆ ಆಧ್ಯತೆ ನೀಡಿವೆ. ಕೊರೊನಾ ಮತ್ತೆ ಹೆಚ್ಚಾಗ್ತಿರುವ ಕಾರಣ ಇನ್ನೂ ಕೆಲ ತಿಂಗಳು ವರ್ಕ್ ಫ್ರಂ ಹೋಮ್ ಮುಂದುವರೆಯಲಿದೆ. ನೀವೂ ಮನೆಯಿಂದಲೇ ಕೆಲಸ ಮಾಡ್ತಿದ್ದರೆ ಕೆಲವೊಂದು ವಿಷ್ಯಗಳನ್ನು ತಿಳಿದುಕೊಳ್ಳಿ. ವರ್ಕ್ ಫ್ರಂ ಹೋಮ್ ಕೆಲವು ಅನುಕೂಲಗಳನ್ನ ಮಾಡಿದ್ರೆ ಮತ್ತೆ ಕೆಲ ಅನಾನುಕೂಲಗಳನ್ನು ಸೃಷ್ಟಿಸಿದೆ.

ಮನೆಯಿಂದ ಕೆಲಸಕ್ಕೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಕೆಲಸ ಮಾಡುವ ಸ್ಥಳ. ಕೆಲಸಕ್ಕಾಗಿ ಪ್ರತ್ಯೇಕ ಕೋಣೆಯ ಅವಶ್ಯಕತೆಯಿದೆ. ಕುಟುಂಬ ಸದಸ್ಯರು ಮತ್ತು ಇತರರ ಚಲನವಲನಕ್ಕೆ ನಿರ್ಬಂಧಗಳಿರಬೇಕು. ಕೆಲಸಕ್ಕೆ ಕುರ್ಚಿ ಮತ್ತು ಮೇಜು ಇರಬೇಕು. ಕೋಣೆಯಲ್ಲಿ ಹಾಸಿಗೆ ಇಡಬೇಡಿ. ಹಾಸಿಗೆಯ ಮೇಲೆ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ. ಕೆಲಸದ ಸ್ಥಳವನ್ನು ಸ್ವಚ್ಚವಾಗಿಡಿ. ವೃತ್ತಿಪರ ವೀಡಿಯೊ ಕರೆಗಾಗಿ ಹಿಂದಿನ ಗೋಡೆಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.

ವರ್ಕ್ ಫ್ರಂ ಹೋಮ್ ಮಾಡುವವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಬೇಕು. ಗ್ರೂಪ್ ವಿಡಿಯೋ ಕಾಲ್ ಗಾಗಿ Google Hangouts ಬಳಸಿ.

ಲಾಗ್ ಇನ್ ಆದ ಮೇಲೆ ತಂಡ ಮತ್ತು ವ್ಯವಸ್ಥಾಪಕರ ಜೊತೆ ಆಗಾಗ ಮಾತನಾಡುತ್ತಿರಿ. ದೈನಂದಿನ ಸಮಸ್ಯೆಗಳನ್ನು ಪರಿಹರಿಸಲು ಸಹೋದ್ಯೋಗಿಗಳೊಂದಿಗೆ ವೀಡಿಯೊ ಕರೆಗಳು ಮತ್ತು ಚಾಟ್‌ ಮಾಡಿದ್ರೆ ತಪ್ಪಿಲ್ಲ. ನಿಮ್ಮ ಕೆಲಸದ ಬಗ್ಗೆ ಹಿರಿಯ ಅಧಿಕಾರಿಗಳಿಂದ ನಿಯಮಿತವಾಗಿ ಪ್ರತಿಕ್ರಿಯೆ ಪಡೆಯಿರಿ.

ಮನೆಯಿಂದ ಕೆಲಸ ಮಾಡುವ ದೊಡ್ಡ ಅಡಚಣೆಯೆಂದರೆ ನಿಮ್ಮ ಜೊತೆ ಕುಟುಂಬದ ಸದಸ್ಯರು ಇರುವುದು. ಕೆಲಸದ ಸಮಯದಲ್ಲಿ ಅವರಿಂದ ದೂರವಿರುವುದು ಒಳ್ಳೆಯದು. ನೀವು ಮನೆಯಲ್ಲಿಲ್ಲ ಎನ್ನುವಂತೆ ಇರಬೇಕು. ಆಗ ಕೆಲಸದ ಮೇಲೆ ಗಮನ ನೀಡಲು ಸಾಧ್ಯವಾಗುತ್ತದೆ. ಕೆಲಸ ಬಿಟ್ಟು ಬೇರೆ ಯಾವುದೇ ವಿಷ್ಯವನ್ನು ಲ್ಯಾಪ್ ಟಾಪ್ ಅಥವಾ ವಾಟ್ಸಾಪ್ ನಲ್ಲಿ ನೋಡಲು ಹೋಗಬೇಡಿ.

ಒಂದು ದಿನದಲ್ಲಿ ಎಲ್ಲವನ್ನು ಅಳವಡಿಸಿಕೊಳ್ಳಲ್ಲು ಸಾಧ್ಯವಿಲ್ಲ. ಕಚೇರಿಗೆ ಹೋಗಿ ಕೆಲಸ ಮಾಡುವುದು ಹಾಗೂ ಮನೆಯಲ್ಲಿ ಕೆಲಸ ಮಾಡುವುದರ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಕಚೇರಿ ವಾತಾವರಣ ಮನೆಯಲ್ಲಿ ಸಿಗಲು ಸಾಧ್ಯವಿಲ್ಲ. ವರ್ಷದಿಂದ ವರ್ಕ್ ಫ್ರಂ ಹೋಮ್ ಮಾಡುತ್ತಿರುವವರು ಈಗ್ಲೂ ಈ ಪರಿಸರಕ್ಕೆ ಹೊಂದಿಕೊಳ್ಳಲು ಆಗ್ತಿಲ್ಲ. ಆದ್ರೆ ಉತ್ಸಾಹ ಕಳೆದುಕೊಳ್ಳಬೇಡಿ. ಕಠಿಣ ಎನಿಸುವ ಕೆಲಸವನ್ನು ಬೆಳಗಿನ ವೇಳೆ ಮಾಡಿ. ಆಗಾಗ ವಿಶ್ರಾಂತಿ ತೆಗೆದುಕೊಳ್ಳಿ. ಗಾಳಿಗೆ ಓಡಾಡಿ. ಸಾಕಷ್ಟು ನೀರು ಸೇವನೆ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...