alex Certify ಬಿಟ್ ಕಾಯಿನ್ ಉಚಿತವಾಗಿ ಪಡೆಯುವುದು ಹೇಗೆ…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಟ್ ಕಾಯಿನ್ ಉಚಿತವಾಗಿ ಪಡೆಯುವುದು ಹೇಗೆ…? ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಬಿಟ್‌ಕಾಯಿನ್ ಹೆಚ್ಚು ಚರ್ಚೆಯಾಗ್ತಿದೆ. ಕ್ರಿಪ್ಟೋ ಕರೆನ್ಸಿಯ ಬಗ್ಗೆ ಅನೇಕರು ತಿಳಿದಿದ್ದಾರೆ. ಈ ಕರೆನ್ಸಿಗೆ ಭಾರತದಲ್ಲಿ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಆದ್ರೆ ಸಾಮಾನ್ಯ ವ್ಯಕ್ತಿ ಕೂಡ ಈ ಕರೆನ್ಸಿ ಪಡೆಯಲು ಬಯಸುತ್ತಿದ್ದಾನೆ. ಬಿಟ್ ಕಾಯಿನ್ ಬೇಕೆನ್ನುವವರಿಗೆ ಉಚಿತವಾಗಿ ಪಡೆಯುವ ವಿಧಾನವೊಂದು ಇಲ್ಲಿದೆ.

ಮಾಹಿತಿಯ ಪ್ರಕಾರ, ಬಿಟ್‌ಕಾಯಿನ್‌ನ ಬೆಲೆ 24.73 ಲಕ್ಷ ರೂಪಾಯಿ. ಒಂದು ಬಿಟ್ ಕಾಯಿನ್ ನಿಮ್ಮ ಬಳಿಗೆ ಬಂದ್ರೂ ನೀವು ಲಕ್ಷಾಧಿಪತಿಯಾದಂತೆ. 2008ರಲ್ಲಿ ಮೊದಲ ಬಾರಿ ಬಿಟ್ ಕಾಯಿನ್  ಪ್ರಾರಂಭವಾಯಿತು. ಈ ಡಿಜಿಟಲ್ ಕರೆನ್ಸಿಯನ್ನು ಯಾವುದೇ ಕೇಂದ್ರ ಬ್ಯಾಂಕ್ ಅಥವಾ ಪ್ರಾಧಿಕಾರವು ಮಾನ್ಯ ಮಾಡುವುದಿಲ್ಲ. ಬಿಟ್‌ಕಾಯಿನನ್ನು ಕರೆನ್ಸಿಯಾಗಿ ಬಳಸಬಹುದಾದ ಅನೇಕ ದೇಶಗಳಿವೆ. ಬಿಟ್‌ಕಾಯಿನನ್ನು ಕಪ್ಪು ಹಣವಾಗಿ ಬಳಸಲಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಪಂಚದಾದ್ಯಂತದ ಅನೇಕ ಕಂಪನಿಗಳು, ಸಮೀಕ್ಷೆ, ಶಾಪಿಂಗ್ ಗಾಗಿ ಬಿಟ್‌ಕಾಯಿನ್ ನೀಡುತ್ತವೆ. ನೀವು ಇದ್ರಲ್ಲಿ ಪಾಲ್ಗೊಂಡು ಬಿಟ್‌ಕಾಯಿನ್ ಖರೀದಿಸಬಹುದು. ಅನೇಕ ಕ್ರಿಪ್ಟೋ ರಿವಾರ್ಡ್ ಶಾಪಿಂಗ್ ಅಪ್ಲಿಕೇಶನ್‌ಗಳ ಮೂಲಕ ಕ್ರಿಪ್ಟೋ ಪಾಯಿಂಟ್‌ಗಳನ್ನು ಸಹ ಗಳಿಸಬಹುದು. Lolli ವೆಬ್ಸೈಟ್ ನಲ್ಲಿ ಯಾವುದೇ ವಸ್ತು ಖರೀದಿ ಮಾಡಿದ್ರೆ ನಿಮಗೆ ಬಿಟ್ ಕಾಯಿನ್ ರೂಪದಲ್ಲಿ ಕ್ಯಾಶ್ಬ್ಯಾಕ್ ಸಿಗುತ್ತದೆ.

ಮೊಬೈಲ್ ನಲ್ಲಿರುವ Coinswitch ಅಪ್ಲಿಕೇಷನ್ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿ. ನಂತ್ರ ಅಪ್ಲಿಕೇಷನ್ ಓಪನ್ ಮಾಡಿ ರೈಟ್ ಏರೋ ಕ್ಲಿಕ್ ಮಾಡಿ. ನೀವು ನೀಡಿರುವ ಮೊಬೈಲ್ ನಂಬರ್ ಗೆ ಒಟಿಪಿ ಹಾಕಿ. ನಂತ್ರ ನಾಲ್ಕು ಅಂಕಿಯ ಪಿನ್ ಸೆಟ್ ಮಾಡಿ. ಎಲ್ಲ ಮುಗಿದ ಮೇಲೆ ನಿಮಗೆ 50 ರೂಪಾಯಿ ಬಿಟ್ ಕಾಯಿನ್ ಸೈನ್ ಅಪ್ ಬೋನಸ್ ಸಿಗುತ್ತದೆ. ಅದು ನಿಮ್ಮ ವಾಲೆಟ್ ನಲ್ಲಿ ಸ್ಟೋರ್ ಆಗುತ್ತದೆ. ಕೆವೈಸಿ ಪೂರ್ಣಗೊಳಿಸಿದ ನಂತ್ರ ನಿಮಗೆ ಸ್ಕ್ರ್ಯಾಚ್ ಕಾರ್ಡ್ ಸಿಗುತ್ತದೆ. ಅದ್ರಲ್ಲಿ 2000 ರೂಪಾಯಿವರೆಗೆ ನಿಮಗೆ ಬಿಟ್ ಕಾಯಿನ್ ಸಿಗುತ್ತದೆ. ಕೆವೈಸಿ ಪೂರ್ಣಗೊಳಿಸಲು ನೀವು ಆಧಾರ್, ಪಾನ್ ಕಾರ್ಡ್ ಫೋಟೋ ಹಾಗೂ ಸೆಲ್ಫಿ ಅಪ್ಲೋಡ್ ಮಾಡಬೇಕು. ನೀವು ಸ್ನೇಹಿತರಿಗೆ ರೆಫರ್ ಮಾಡಿದ್ರೆ 50 ರೂಪಾಯಿ ಬಿಟ್ ಕಾಯಿನ್ ಸಿಗುತ್ತದೆ. ಆದ್ರೆ ದಿನಕ್ಕೆ ಮೂರು ಸ್ನೇಹಿತರನ್ನು ಮಾತ್ರ ಆಹ್ವಾನಿಸಬಹುದು. ಇದಲ್ಲದೆ ಫ್ರೀ ಬಿಟ್ ಕಾಯಿನ್ ವೆಬ್ಸೈಟ್ ನಲ್ಲಿ ಕೂಡ ನೀವು ಬಿಟ್ ಕಾಯಿನ್ ಪಡೆಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...