alex Certify ಸ್ಮಾರ್ಟ್ಫೋನ್ ಖರೀದಿದಾರರಿಗೆ ಭರ್ಜರಿ ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮಾರ್ಟ್ಫೋನ್ ಖರೀದಿದಾರರಿಗೆ ಭರ್ಜರಿ ಖುಷಿ ಸುದ್ದಿ

Xiaomi Redmi 9A, Redmi 9C launched: Price, full specifications and ...

ಚೀನಾದ ಕಂಪನಿ ಶಿಯೋಮಿ ಜಾಗತಿಕ ಮಾರುಕಟ್ಟೆಗೆ ಒಂಬತ್ತು ಉತ್ಪನ್ನಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡಿದೆ. ಮಿ ಸ್ಮಾರ್ಟ್ ಬ್ಯಾಂಡ್ 5, ಎಲೆಕ್ಟ್ರಿಕ್ ಸ್ಕೂಟರ್, ಟಿವಿ ಸ್ಟಿಕ್ ಸೇರಿದಂತೆ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಸಹ ಒಳಗೊಂಡಿದೆ. ಕಂಪನಿಯು ರೆಡ್‌ಮಿ 9 ಸರಣಿಯ ಸ್ಮಾರ್ಟ್‌ಫೋನ್‌ಗಳಾದ ರೆಡ್‌ಮಿ 9, ರೆಡ್‌ಮಿ 9 ಎ ಮತ್ತು ರೆಡ್‌ಮಿ 9 ಸಿ ಅನ್ನು ಪರಿಚಯಿಸಿದೆ.

ಈ ಮೂರು ಸ್ಮಾರ್ಟ್‌ಫೋನ್‌ಗಳನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.  ರೆಡ್ಮಿ 9 ಎ ಯ ಆರಂಭಿಕ ಬೆಲೆ  8,500 ರೂಪಾಯಿಗಳು. ರೆಡ್ಮಿ 9 ಸಿ ಆರಂಭಿಕ ಬೆಲೆ 10,200 ರೂಪಾಯಿಗಳು ಮತ್ತು ರೆಡ್ಮಿ 9 ಆರಂಭಿಕ ಬೆಲೆ 12,800 ರೂಪಾಯಿಗಳು.

ರೆಡ್ಮಿ 9  ಸ್ಮಾರ್ಟ್ಫೋನ್ 6.53-ಇಂಚಿನ ಪೂರ್ಣ ಎಚ್ಡಿ + ಡಿಸ್ಪ್ಲೇ ಹೊಂದಿದೆ. 5020 ಎಮ್‌ಎಹೆಚ್ ಬ್ಯಾಟರಿ ಇದ್ದು, ಇದು 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 13 ಮೆಗಾಪಿಕ್ಸೆಲ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.

ರೆಡ್ಮಿ 9 ಸಿ ಸ್ಮಾರ್ಟ್ಫೋನ್ 6.53 ಇಂಚಿನ ಡಿಸ್ಪ್ಲೇ ಹೊಂದಿದೆ.  2 ಜಿಬಿ + 32 ಜಿಬಿ ಮತ್ತು 3 ಜಿಬಿ + 64 ಜಿಬಿಯಲ್ಲಿ ಬರುತ್ತದೆ. ರೆಡ್ಮಿ 9 ಎ  ಸ್ಮಾರ್ಟ್ಫೋನ್ 6.53-ಇಂಚಿನ ಪೂರ್ಣ ಎಚ್ಡಿ + ಡಿಸ್ಪ್ಲೇ ಹೊಂದಿದೆ. 2 ಜಿಬಿ + 32 ಜಿಬಿಯಲ್ಲಿ ಲಭ್ಯವಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...